ಕಾನೂನು ವಿವಿಯಲ್ಲಿ ಕ್ರೀಡಾ ದಿನಾಚರಣೆ

IMG-20240830-WA0012.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಗುರುವಾರ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ವಾಕ್ ಫಾರ್ ಹೆಲ್ತ್, ಜಾಗ್ ಫಾರ್ ಫಿಟ್ನೆಸ್ ಹಾಗೂ ರನ್ ಫಾರ್ ಕಾಂಪಿಟೇಶನ್ ಸ್ಪರ್ಧೆಗಳು ನಡೆದವು.

ಸ್ಪರ್ಧೆಗಳಿಗೆ ಚಾಲನೆ ನೀಡಿದ ವಿವಿ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಆರೋಗ್ಯ ಮತ್ತು ಸದೃಢ ಮನಸ್ಥಿತಿ ಹೊಂದಲು ಇಂತಹ ಸ್ಪರ್ಧೆಗಳು ಅಗತ್ಯ ಎಂದರು.

ಸುಮಾರು ಮೂರು ಕಿ.ಮೀ. ಓಟದಲ್ಲಿ ಸಿಬ್ಬಂದಿ ಪಾಲ್ಗೊಂಡರು. 40 ವರ್ಷ ಮೇಲ್ಪಟ್ಟ ಹಾಗೂ ಒಳಗಿನವರಿಗೆ ಮತ್ತು 50 ವರ್ಷ ಮೇಲ್ಪಟ್ಟವರಿಗಾಗಿ ಸ್ಪರ್ಧೆಗಳು ನಡೆದವು. ವಿಜೇತರಿಗೆ ಪಾರಿತೋಷಕ, ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

ಸಿಂಡಿಕೇಟ್ ಸದಸ್ಯ ವಸಂತ ಲದವಾ, ಕುಲಸಚಿವೆ ಅನುರಾಧಾ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡ್ರ, ಕ್ರೀಡಾ ನಿರ್ದೇಶಕ ಡಾ. ಖಾಲೀದ ಖಾನ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net