

ಕುಶಾಲನಗರ:
ಕೂಡಿಗೆಯಲ್ಲಿರುವ ಸರ್ಕಾರಿ ಕ್ರೀಡಾ ಪ್ರೌಢ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿದ ಶಾಲೆಯ ಕ್ರೀಡಾಪಟುಗಳಾದ ಚಪ್ಪುಡಿರ ನಾಚಪ್ಪ, ಪ್ರತೀಕ್ ಯರಕಲ್, ಖುಷಿ, ಅರ್ಚನಾ ದೀಪ ಬೆಳಗಿ ಧ್ಯಾನ್‌ಚಂದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕ್ರೀಡಾ ದಿನಕ್ಕೆ ಚಾಲನೆ ನೀಡಿದರು.
ದಿನದ ಮಹತ್ವದ ಬಗ್ಗೆ ಮಾತನಾಡಿದ ಶಾಲೆಯ ಹಾಕಿ ತರಬೇತುದಾರ ವೆಂಕಟೇಶ್, ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡುವ ಮತ್ತು ಕೌಶಲ್ಯ ಪ್ರದರ್ಶಿಸುವ ವಿಷಯಕ್ಕೆ ಸಂಬAಧಿಸಿದAತೆ ಸಮಗ್ರ ಮಾಹಿತಿಯನ್ನು ಒದಗಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಮಾತಾನಾಡಿ ಕ್ರೀಡಾ ಪಟುಗಳು, ಹಿರಿಯ ಕ್ರೀಡಾಪಟುಗಳ ಮಾರ್ಗದರ್ಶನದಲ್ಲಿ ಸಾಗಿ ತಮ್ಮ ಪ್ರತಿಭೆಯ ಮುಖೇನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಸಾಧನೆಯನ್ನು ಸಾಧಿಸಲು ವಿದ್ಯಾರ್ಥಿಗಳು ಪಣತೊಡುವ ಕಾರ್ಯದಲ್ಲಿ ತಲಿನರಾಗಬೇಕು ಎಂದರು.
ಕ್ರೀಡಾ ತರಬೇತುದಾರರಾದ ಸುರೇಶ್, ದಿನಮಣಿ, ಆಶ್ವಿತ, ಶಿಕ್ಷಕರಾದ ರಂಜಿನಿ, ಗೀತಾ, ಆಶಾ, ಸವಿತ, ಮೋಹನ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.
ಕ್ರೀಡಾ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಕಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರ ನೇತೃತ್ವವನ್ನು ಪ್ರಥಮ ಪದವಿ ಪೂರ್ವ ತರಗತಿಯ ವಿದ್ಯಾರ್ಥಿಗಳಾದ ನಿಹಾಲ್ ಸಂತೋಷ್, ಮೋಕ್ಷಿತ್ ವಹಿಸಿದ್ದರು.