ಶಿಕ್ಷಕರ ದಿನಾಚರಣೆ ಹಿನ್ನೆಲೆ ಕ್ರೀಡೆ-ಸಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

TEACHERS SPORTS
ವಿಜಯಪುರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ವ್ಹಾಲಿಬಾಲ್ ಗೆಳೆಯರ ಬಳಗದ ವತಿಯಿಂದ ಕ್ರೀಡಾಕೂಟ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾಜಶೇಕರ ದೈವಾಡಗಿ, ಸುರೇಶ ಶೆಡಶ್ಯಾಳ, ಸಯ್ಯದ ಜುಬೇರ ಕೆರೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಶಿಕ್ಷಕರ ದಿನಾಚರಣೆ ಹಿನ್ನೆಲೆ ವ್ಹಾಲಿಬಾಲ್ ಗೆಳೆಯರ ಬಳಗದಿಂದ ಶನಿವಾರ ಶಿಕ್ಷಕರಿಗಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ವ್ಹಾಲಿಬಾಲ್, ಖೋಖೋ, ಥ್ರೋಬಾಲ್ ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಾಮೂಹಿಕ ಜಾನಪದ ಗಾಯನ ಹಾಗೂ ಪ್ರಬಂಧ ರಚನೆ ಸ್ಪರ್ಧೆಗಳಲ್ಲಿ ಶಿಕ್ಷಕರು ಭಾಗವಹಿಸಿದ್ದರು.

ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಕರ ದೈವಾಡಗಿ ಮಾತನಾಡಿ, ಶಿಕ್ಷಕ ದಿನೋತ್ಸವ ನಿಮಿತ್ಯ ವ್ಹಾಲಿಬಾಲ್ ಗೆಳೆಯರ ಬಳಗದ ವತಿಯಿಂದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಿರುವುದು ಶ್ಲಾಘನೀಯ. ಜಿಲ್ಲೆಯ ಕ್ರೀಡಾಪಟುಗಳ ಕೀರ್ತಿ ರಾಜ್ಯ- ರಾಷ್ಟ್ರ ಹಂತಕ್ಕೆ ಹರಡಲೆಂದು ಆಶಿಸುವುದಾಗಿ ತಿಳಿಸಿದರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಖಜಾನೆ ಅಧಿಕಾರಿ ಹಣಮಂತ ಕಾಲತಿಪ್ಪಿ, ಜಿಲ್ಲಾ ಕೋಶಾಧ್ಯಕ್ಷ ಸಯ್ಯದ ಜುಬೇರ ಕೆರೂರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ, ಜಿಒಸಿಸಿ ಬ್ಯಾಂಕ್ ನಿರ್ದೇಶಕಿ ಜಯಶ್ರೀ ಬೆಣ್ಣಿ, ಬಾಗೇವಾಡಿಯ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ತಿಕೋಟಾ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ, ಶಿಕ್ಷಕರ ಸಂಘದ ಜಿಲ್ಲಾ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ, ಎಸ್.ಎನ್. ಪಡಶೆಟ್ಟಿ, ಅಜೀಜ್ ಅರಳೀಮಟ್ಟಿ, ಬಶೀರ ನದಾಫ್, ಬಸವರಾಜ ಗಿರಿನಿವಾಸ, ಜಗದೀಶ ಅಕ್ಕಿ, ಶಿವು ಮಡಿಕೇಶ್ವರ, ನಗರವಲಯದ ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ. ಬಿರಾದಾರ, ಕೋಲಾರ ಶಿಕ್ಷಕ ಸಂಘದ ಅಧ್ಯಕ್ಷರ ಸುರೇಶ ಬಿರಾದಾರ, ಮಂಜುನಾಥ ಅರೆಶಂಕರ, ಬಸವರಾಜ ಅಮರಪ್ಪಗೋಳ, ಶಿಕ್ಷಕ ಸಂಘದ ಗ್ರಾಮೀಣವಲಯದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಬೂದಿಹಾಳ ಮತ್ತಿತರರಿದ್ದರು. ಕ್ರೀಡಾ ಕಾರ್ಯದರ್ಶಿ ನಿಜು ಮೇಲಿನಕೇರಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net