ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

FotoJet (2)
Published on

 ಚಿಕ್ಕನಾಯಕನಹಳ್ಳಿ : ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಹಾಗೂ ದೈಹಿಕ ಮತ್ತು ಮಾನಸಿಕ ದೃಢತೆಗೆ ಕ್ರೀಡೆ ಮುಖ್ಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಮಂಗಳವಾರ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ವಿಷಯವನ್ನು ಕ್ರೀಡಾಮನೋಭಾವನೆಯಿಂದ ನೋಡಿದರೆ ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣಬಹುದು. ಉತ್ತಮ ಆರೋಗ್ಯ ಸಮಾಜ ಸೃಷ್ಟಿಸಬಹುದು. ಕ್ರೀಡೆಯಿಂದ ದೇಹ ಆರೋಗ್ಯ ಚೆನ್ನಾಗಿರುತ್ತದೆ. ಅದ್ದರಿಂದ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಿ ಎಂದರು.

ಗ್ಯಾರಂಟಿ ಯೋಜನೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್​ ಮಾತನಾಡಿ, ಈ ಹಿಂದೆಲ್ಲ ಗ್ರಾಮೀಣ ಕ್ರೀಡೆಗಳಿದ್ದವು. ಹಿಂದೆ ಕ್ರೀಡೆಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಮಕ್ಕಳು ಹೆಚ್ಚು ಮೊಬೈಲ್​ ಗೀಳನ್ನು ಹತ್ತಿಸಿಕೊಂಡು ಮೈದಾನಕ್ಕೆ ಹೋಗುವುದನ್ನೇ ಮರೆಯುತ್ತಿದ್ದಾರೆ. ಇನ್ನು ಮುಂದಾದರು ಹೆಚ್ಚು ಕ್ರೀಡೆಯತ್ತ ಮಕ್ಕಳು ಆಸಕ್ತಿ ತೋರಿಸಬೆಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ದೈಹಿಕ ಶಿಕ್ಷಕರು ಉತ್ತಮ ರೀತಿಯಲ್ಲಿ ಪ್ರಾಮಾಣಿಕವಾಗಿ ತೀರ್ಪನ್ನು ನೀಡಿ. ಮಕ್ಕಳ ರಕ್ಷಣೆಯಲ್ಲಿ ಹೆಚ್ಚು ಗಮನಹರಿಸಿ. ತಾಲೂಕಿಗೆ ಕೀರ್ತಿ ತರುವಂತಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರ್​.ಪರಶಿವಮೂರ್ತಿ ಮಾತನಾಡಿದರು. ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಅಕ್ಷರದಾಸೋಹದ ಅಧಿಕಾರಿ ಗವಿರಂಗಯ್ಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಾಮು, ದುರ್ಗಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net