

ಕುಂದಾಪುರ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆ, ಧಾರ್ಮಿಕ, ಕಾರ್ಯಗಳಲ್ಲಿ ತೊಡಗಿದರೆ ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯ. ಪ್ರತಿಯೊಬ್ಬರು ಪರಸ್ಪರ ಅರಿತು ನಡೆದರೆ ಸಮಾಜದಲ್ಲಿ ಶಾಂತಿ ನೆಲೆಯಾಗುತ್ತದೆ ಎಂದು ಎನ್.ಎನ್.ಒ ಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಸಲೀಮ್ ಮೂಡುಬಿದಿರೆ ಹೇಳಿದರು.
ಕುಂದಾಪುರ ಎನ್.ಎನ್.ಒ. ಕಮ್ಯುನಿಟಿ ಸೆಂಟರ್ ಆಶ್ರಯದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ 10 ವಿದ್ಯಾರ್ಥಿಗಳಿಗೆ ಬೈತುಲ್ ಮಾಲ್ ಹಂಗಾರಕಟ್ಟೆ ಸಹಕಾರದೊಂದಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಎನ್.ಎನ್.ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಎನ್.ಎನ್.ಒ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಉದ್ಯಮಿಗಳಾದ ಆದಿಲ್ ಸಾಲಿಗ್ರಾಮ, ಫೈರೋಜ್ ಖಾನ್ ಮೈಸೂರ್, ಉಡುಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಫಾಝಿಲ್ ಆದಿ ಉಡುಪಿ, ದಾರುಲ್ ಹುದಾ ಚಾರಿಟೆಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಾ.ನಕ್ವಾ ಪರ್ವೇಜ್ ಅಹ್ಮದ್ ಉಮ್ರಿ ಮದನಿ, ಘಟಕ ಜಿಲ್ಲಾ ಖಜಾಂಚಿ ನಕ್ವಾ ಯಾಯ್ಯ, ಬೈತುಲ್ ಮಾಲ್ ಹಂಗಾರಕಟ್ಟೆ ಖಜಾಂಚಿ ಜವಾದ್ ಅಕ್ಬರ್, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸುಫ್ ಸಲೀಮ್, ಉಡುಪಿ ಘಟಕ ಉಪಾಧ್ಯಕ್ಷ ರಿಯಾಜ್ ಅಹ್ಮದ್ ಉಡುಪಿ, ಎನ್.ಎನ್.ಒ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹಿರ್ ಅಹ್ಮದ್ ಗಂಗೊಳ್ಳಿ, ಕುಂದಾಪುರ ಘಟಕ ಅಧ್ಯಕ್ಷ ಎಸ್.ದಸ್ತಗೀರ್, ಉಡುಪಿ ಘಟಕ ಅಧ್ಯಕ್ಷ ನಝಿರ್ ನೆಜಾರ್, ಕುಂದಾಪುರ ಎನ್.ಎನ್.ಒ ಕಮ್ಯುನಿಟಿ ಸೆಂಟರ್ ಉಪಾಧ್ಯಕ್ಷ ಮೊಹಮ್ಮದ್ ಗುಲ್ವಾಡಿ, ಮನ್ಸೂರ್ ಇಬ್ರಾಹಿಂ, ಅಬ್ದುಲ್ ಖಾದರ್, ಸದಸ್ಯರಾದ ಅಲ್ತಾಫ್, ಖಜಾಂಚಿ ಅನ್ವರ್, ಉಪಾಧ್ಯಕ್ಷ ನಿಹಾರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಅಬು ಮೊಹಮ್ಮದ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹುಸೇನ್ ಪ್ರಾಸ್ತಾವಿಕ ಮಾತನಾಡಿದರು. ನಾಸಿರ್ ವಂದಿಸಿದರು.