

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರೀಡಾ ಭಾರತಿ ವತಿಯಿಂದ ರಾಜ್ಯದಲ್ಲಿ ಏರ್ಪಡಿಸಿರುವ ರಾಜ್ಯ ಕ್ರೀಡಾ ಸಮ್ಮೇಳನ ಅಂಗವಾಗಿ ಜ. 11ರಂದು ನಗರದ ಕೆಸಿಡಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಲಗೋರಿ ಹಾಗೂ ಹಗ್ಗ ಜಗ್ಗಾಟ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಭಾರತಿ ಜಿಲ್ಲಾಧ್ಯಕ್ಷ ಬಿ.ಎಸ್. ತಾಳಿಕೋಟಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಯಿಂದ ಕ್ರೀಡೆಗಳು ಆರಂಭವಾಗಲಿವೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ತಂಡಗಳು ಜ. 19ರಂದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದರು.
ಲಗೋರಿ ಹಾಗೂ ಹಗ್ಗ ಜಗ್ಗಾಟಗಳನ್ನು 2 ವಿಭಾಗಗಳಲ್ಲಿ ನಡೆಸಲಾಗುತ್ತಿದೆ. ಲಗೋರಿಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಭಾರತಿ ಸದಸ್ಯರ ತಂಡಗಳು ಭಾಗವಹಿಸಬಹುದು. ಹಗ್ಗ ಜಗ್ಗಾಟದಲ್ಲಿ ಶಾಲಾ ವಿದ್ಯಾರ್ಥಿಗಳ (ಗಂಡು ಮಕ್ಕಳು ಮಾತ್ರ), ಕ್ರೀಡಾ ಭಾರತಿ ಪುರುಷ ಸದಸ್ಯರು ಮಾತ್ರ ಭಾಗವಹಿಸಬಹುದು. ಪ್ರತಿ ತಂಡದಲ್ಲಿ 7 ಹಾಗೂ ಇಬ್ಬರು ಹೆಚ್ಚುವರಿ ಸೇರಿ ಒಟ್ಟು 9 ಜನರು ಭಾಗವಹಿಸಬಹುದು ಎಂದರು.
ಆಸಕ್ತ ತಂಡಗಳು ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಬ್ರಹ್ಮಚೈತನ್ಯ ಪಾರ್ಕ್ 3ನೇ ಅಡ್ಡ ರಸ್ತೆ, ಸಾಧನಕೇರಿಯಲ್ಲಿನ ಕ್ರೀಡಾ ಭಾರತಿ ಕಚೇರಿ ಸಂಪಕಿರ್ಸಬಹುದು ಎಂದರು.
ಕೆ.ಎಸ್. ಭೀಮಣ್ಣವರ, ಪುಲಕೇಶಿ ಶೆಟ್ಟಪ್ಪನವರ, ಈಶ್ವರ ಅಂಗಡಿ, ಪರಪ್ಪ, ಇತರರು ಇದ್ದರು.