

ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆಯ ಅಂಗವಾಗಿ ನ.28 ರಿಂದ 30ರವರೆಗೆ ಹಮ್ಮಿಕೊಂಡ ಜೆಎಸ್‌ಎಸ್ ಅಂತರ ಸಂಸ್ಥೆಗಳ ಕ್ರೀಡಾಕೂಟದಲ್ಲಿ ಸುತ್ತೂರು ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಬಾಲಕರ ವಿಭಾಗದಲ್ಲಿ 600 ಮೀ ಓಟದಲ್ಲಿ ಸುತ್ತೂರು ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆಯ ಅಂಬರೀಶ್ ದ್ವಿತೀಯ, ಕರಣ್ ತೃತೀಯ, 400 ಮೀ. ಓಟದಲ್ಲಿ ಕೆ. ತರುಣ್ ಪ್ರಥಮ, 200 ಮೀ. ಮತ್ತು 100 ಮೀ. ಓಟದಲ್ಲಿ ಪವನ್ ಕುಮಾರ್ ದ್ವಿತೀಯ, ಎತ್ತರ ಜಿಗಿತ ಮತ್ತು ಚಕ್ರ ಎಸೆತದಲ್ಲಿ ಯಶ್ವಂತ್ ಪ್ರಥಮ, ನಿಖಿಲ್ ಉದ್ದಜಿಗಿತದಲ್ಲಿ ದ್ವಿತೀಯ ಹಾಗೂ ಗುಂಡು ಎಸೆತದಲ್ಲಿ ತೃತೀಯ, 4 ್ಡ 100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದರು.
ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದರು. ರೋಹಿತ್ ಉತ್ತಮ ದಾಳಿಗಾರ ಪ್ರಶಸ್ತಿ ಪಡೆದರು. ಬಾಲಕರ ವಿಭಾಗದಲ್ಲಿ ಯಶ್ವಂತ್ 13 ಅಂಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಗೆ ಭಾಜನರಾದರು. ಬಾಲಕರ ವಿಭಾಗದಲ್ಲಿ ಒಟ್ಟು 43 ಅಂಕ ಪಡೆದು ಸಮಗ್ರ ಪ್ರಶಸ್ತಿ ಪಡೆಯಿತು.
ಬಾಲಕಿಯರ ವಿಭಾಗದಲ್ಲಿ 600 ಮೀ. ಓಟದಲ್ಲಿ ರಂಜಿತಾ ಪ್ರಥಮ, ದೀಪಿಕಾ ದ್ವಿತೀಯ, 200 ಮೀ. ಮತ್ತು 100 ಮೀ. ಓಟದಲ್ಲಿ ಸಾಕ್ಷಿ ಪ್ರಥಮ, ಗುಂಡು ಎಸೆತದಲ್ಲಿ ಆಯಿಷಾ ತೃತೀಯ, ತಟ್ಟೆ ಎಸೆತದಲ್ಲಿ ತನ್ಮಯಿ ತೃತೀಯ, ಎತ್ತರ ಜಿಗಿತದಲ್ಲಿ ರೇಷ್ಮಾ ತೃತೀಯ, ಉದ್ದ ಜಿಗಿತದಲ್ಲಿ ದೀಪಿಕಾ ಪ್ರಥಮ, 4 ್ಡ 100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದರು. ಪಥಚಲನೆಯಲ್ಲಿ ತೃತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಸಾಕ್ಷಿ 10 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು. ಬಾಲಕಿಯರ ವಿಭಾಗದಲ್ಲಿ ಒಟ್ಟು 37 ಅಂಕ ಪಡೆದು ಸಮಗ್ರ ಪ್ರಶಸ್ತಿ ಪಡೆಯಿತು.