ಸಾಮಾಜಿಕ ಕೌಶಲ್ಯ ಅಭಿವೃದ್ದಿಗೆ ಕ್ರೀಡೆ ಪೂರಕ

24bnk1
Published on

ಬಣಕಲ್: ಕ್ರೀಡೆ ಮತ್ತು ಶಿಕ್ಷಣ ವಿದ್ಯಾರ್ಥಿಗಳ ಸಾಮಾಜಿಕ ಕೌಶಲ್ಯಗಳ ಅಭಿವೃದ್ಧಿಗೆ ಪೂರಕವಾಗಿದ್ದು, ಮಕ್ಕಳ ದೈಹಿಕ ಸಾಮರ್ಥ್ಯ ಹೊಂದಲು ಕ್ರೀಡೆ ಸಹಕಾರಿಯಾಗಿದೆ ಎಂದು ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಹೇಳಿದರು.
ಬಣಕಲ್ ಪ್ರೌಢಶಾಲೆ ಮೈದಾನದಲ್ಲಿ ರಿವರ್ ವ್ಯೆವ್‌ಅತಿಥೇಯ ಶಾಲೆ ಆಯೋಜಿಸಿದ್ದ ಪ್ರಾಥಮಿಕ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು. ಕನ್ನಡ ಪರ ಹೋರಾಟಗಾರ ಹೊರಟ್ಟಿ ರಘು ಮಾತನಾಡಿ, ಶಿಕ್ಷಣದಿಂದ ಮಕ್ಕಳು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳು ಸ್ಪರ್ಧಾತ್ಮಕವಾಗಿ ಬೆಳೆಯಬಲ್ಲರು. ಕ್ರೀಡೆಗಳು ಆತ್ಮವಿಶ್ವಾಸದ ಜತೆಗೆ ನಾಯಕತ್ವ, ಹೊಣೆಗಾರಿಕೆ, ತಾಳ್ಮೆಯಂತಹ ಕೌಶಲ್ಯಗಳನ್ನು ಕಲಿಸುತ್ತದೆ ಎಂದರು.
ಮಾಜಿ ಯೋಧರಾದ ಎನ್.ಟಿ ದಿನೇಶ್ ಮತ್ತು ಹಿಲಾರಿ ಕಾರ್ಯಕ್ರಮ ಉದ್ಘಾಟಿಸಿದರು. ರಿವರ್‌ವ್ಯೆವ್ ಶಾಲಾ ಮುಖ್ಯಸ್ಥ ಮೊಹಮ್ಮದ್ ಇಮ್ರಾನ್, ಗ್ರಾಪಂಅಧ್ಯಕ್ಷೆ ಅತಿಕಾಭಾನು, ದಿಲ್ ದಾರ್ ಬೇಗಂ, ರ್ಇಾನ್, ಸಿರಾಜುದ್ದೀನ್,ಜಾಭೀರ್,ಉತ್ತಮ್, ಬಿ.ಸಿ.ಪ್ರವೀಣ್, ಸಂಜಯ್‌ಗೌಡ, ಪಿ.ವಾಸುದೇವ್, ದಿನೇಶ್ ಶೆಟ್ಟಿ, ಶಿವರಾಮ್ ಶೆಟ್ಟಿ, ಬಿ.ಎಸ್.ವಿಕ್ರಂ, ಮದನ್ ಹೆಗ್ಡೆ, ಸೂರಿ ಬಣಕಲ್, ಮುಖ್ಯ ಶಿಕ್ಷಕ ಮನಮೋಹನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net