ಮೈಸೂರಿನಲ್ಲಿ ಹಿರಿಯ ನಾಗರಿಕರಿಗೆ ಕ್ರೀಡಾ ಸ್ಪರ್ಧೆ

Sports competition for senior citizens in Mysore
Published on

ಮೈಸೂರು: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ವಿಕಲಚೇನರ ಕಲ್ಯಾಣ ಸಂಸ್ಥೆಗಳ ಒಕ್ಕೂಟ ವತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶನಿವಾರ ಹಿರಿಯ ನಾಗರಿಕರಿಗೆ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿತ್ತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್. ರಾಘವೇಂದ್ರ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾ ವಿಕಲಚೇ ನರ ಕಲ್ಯಾಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ್ ದೀಕ್ಷಿತ್, ಜೆಎಸ್‌ಎಸ್ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಂಯೋಜನಾಧಿಕಾರಿ ಎಸ್. ಬಸವರಾಜು, ಇಲಾಖೆಯ ಅಧಿಕಾರಿ ಸುದರ್ಶನ್, ಮಾತೃಶ್ರಿ ವೃದ್ಧಾಶ್ರಮದ ಅಧ್ಯಕ್ಷ ಮಂಜುನಾಥ್ ಹಾಗೂ ಇತರರು ಇದ್ದರು. ಸುಮಾರು 80ಕ್ಕು ಹೆಚ್ಚು ಹಿರಿಯ ನಾಗರಿಕರು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ವಿಜೇತರ ವಿವರ: ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿವರ ಈ ಕೆಳಕಂಡಂತೆ ಇದೆ. ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆ ಪುರುಷರ ವಿಭಾಗ (60 ರಿಂದ 69 ವರ್ಷ)ದಲ್ಲಿ ಪರ್ವತಪ್ಪ , ಗೋಪಿನಾಥ್, ರೇವಣ್ಣ, 70 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಾದೇವಗೌಡ , ಪುಟ್ಟೇಗೌಡ, ನಂಜಪ್ಪ, ಮಹಿಳೆಯರ ವಿಭಾಗದಲ್ಲಿ (60 ರಿಂದ 69 ವರ್ಷ) ಗೀತಾಮಣಿ , ಸರ್ವಮಂಗಳ , ನಿರ್ಮಲ, 70 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಶಾರದಮ್ಮ , ಪಾರ್ವತಮ್ಮ, ಲಲಿತಶರ್ಮ ವಿಜೇತರಾದರು.

ಬಿರುಸಿನ ನಡಿಗೆ ಸ್ಪರ್ಧೆ ಪುರುಷರ ವಿಭಾಗದಲ್ಲಿ (60 ರಿಂದ 69 ವರ್ಷ) ಪರ್ವತಪ್ಪ, ಶ್ರೀಕಂಠೇಶ್, ರೇವಣ್ಣ, 70 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸೋಮಶೇಖರ್, ಎಚ್.ಎಸ್.ಪ್ರಭಾಕರ್, ಪುಟ್ಟೇಗೌಡ, ಮಹಿಳೆಯರ ವಿಭಾಗದಲ್ಲಿ (60 ರಿಂದ 69 ವರ್ಷ), ನಿರ್ಮಲ, ಪುಷ್ಪಾ ಪ್ರಭಾಕರ್, ಸೆಲ್ವಿನ್ ಡಿಸೋಜಾ, 70 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪಾರ್ವತಮ್ಮ, ರೇಣುಕಾ, ಪ್ರಭಾಮಣಿ ಗೆಲುವು ಸಾಧಿಸಿದರು.

ಮ್ಯೂಸಿಕಲ್ ಚೇರ್ ಪುರುಷರ ವಿಭಾಗದಲ್ಲಿ (60 ರಿಂದ 69 ವರ್ಷ), ನಾಗರಾಜು, ರಾಜು, ಗೋಪಿನಾಥ್, 70 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಗುಂಡಾಚಾರ್, ಪರಮೇಶ್ವರ ಶೆಟ್ಟಿ, ಭಗವಾನ್, ಮಹಿಳೆಯರ ವಿಭಾಗದಲ್ಲಿ (60 ರಿಂದ 69 ವರ್ಷ) ಪುಷ್ಪಾ, ನಿರ್ಮಲಾದೇವಿ, ಸಣ್ಣಮ್ಮ, 70 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಶಕುಂತಲಾ, ವೆಂಕಟಮ್ಮ, ಲಕ್ಷ್ಮಮ್ಮ ವಿಜೇತರಾದರು. ವಿಜೇತರಿಗೆ ಅ.1 ರಂದು ಬೆಳಗ್ಗೆ 11ಕ್ಕೆ ಜೆಎಸ್‌ಎಸ್ ಆಸ್ಪತ್ರೆಯ ಆವರಣ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿರುವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net