ಕ್ರೀಡೆಗಳಿಂದ ನಾಯಕತ್ವ ಗುಣ ವೃದ್ಧಿ ಸಾಧ್ಯ

Sports can develop leadership qualities
ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಬಿವಿಪಿ ವತಿಯಿಂದ ಹಮ್ಮಿಕೊಂಡಿದ್ದ ನಗರ ಕ್ರೀಡೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಸಚಿನ್ ಕುಳಗೇರಿ, ರಾಘವ ಅಣ್ಣಿಗೇರಿ, ಸುಮಾ ಬೋಳರೆಡ್ಡಿ ಇತರರಿದ್ದರು.
Published on

ವಿಜಯಪುರ: ಮನುಷ್ಯನ ಜೀವನದಲ್ಲಿ ಕ್ರೀಡೆ ನಾಯಕತ್ವ ಗುಣ ಬೆಳೆಸಲು ಸಹಕಾರಿ ಆಗಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ನಗರ ಕ್ರೀಡೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಿಸ್ತು, ಜವಾಬ್ದಾರಿ ಮತ್ತು ಸಮಯಪ್ರಜ್ಞೆ ಮೂಡುತ್ತದೆ ಎಂದರು.

ಜೀವನದ ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಗೆ ಅಗತ್ಯ ಗುಣಗಳನ್ನು ಕ್ರೀಡೆ ಕಲಿಸುತ್ತದೆ. ಹೀಗಾಗಿ ಎಬಿವಿಪಿ ನಗರ ಕ್ರೀಡೋತ್ಸವ ಮೂಲಕ ರಾಜ್ಯದ ಶಾಖೆಗಳಲ್ಲಿ ಅಲ್ಲಿನ ಸ್ಥಳೀಯ ಕ್ರೀಡೆಗಳಿಗೆ ಪ್ರಾಶಸ್ತ್ಯ ನೀಡಿ ಕ್ರೀಡಾ ಚಟುವಟಿಕೆ ಆಯೋಜಿಲಾಗುತ್ತಿದೆ ಎಂದರು.

ಸಿದ್ಧಸಿರಿ ಸೌಹಾರ್ದದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿ, ಭಾರತ ದೇಶ ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಗೈಯುತ್ತಿದೆ. ದೇಶದ ಶಕ್ತಿ ಯುವಶಕ್ತಿ. ಈ ಯುವಶಕ್ತಿ ತಮ್ಮ ಶಿಕ್ಷಣದ ಜತೆಗೆ ಕ್ರೀಡೆ, ಪರಿಸರ, ಸಾಮಾಜಿಕ ಕಾರ್ಯದಂತದ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕ್ರೀಡೋತ್ಸವದಲ್ಲಿ ನಗರದ 16 ಕಾಲೇಜುಗಳ ಪುರುಷರ ತಂಡಗಳು ಭಾಗವಹಿಸಿದ್ದವು. ಪುರುಷರ ವಾಲಿಬಾಲ್‌ನಲ್ಲಿ ಜಗಜ್ಯೋತಿ ಬಸವೇಶ್ವರ ಪದವಿ ಕಾಲೇಜು ಪ್ರಥಮ ಹಾಗೂ ಪ್ರಕಾಶ ಸಿಎನ್ ಕಾಲೇಜು ದ್ವಿತೀಯ ಸ್ಥಾನ ಪಡೆದವು. ವಿಜೇತ ತಂಡಗಳಿಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಗಿ ಪ್ರಶಸ್ತಿ ವಿತರಿಸಿದರು.

ಎಬಿವಿಪಿ ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರೆಡ್ಡಿ, ವಿಭಾಗ ಸಹ ಪ್ರಮುಖ ಅಮೀತ್‌ಕುಮಾರ ಬಿರಾದಾರ, ಅಪ್ಪಾಜಿ ಹೂಗಾರ, ಸಂದೀಪ ಅರಳಗುಂಡಿ, ಹರ್ಷ ನಾಯಕ, ಎಸ್.ಎಸ್. ಹಿರೇಮಠ, ಎಂ.ಎಸ್. ಬಿರಾದಾರ, ಸಂಜೀವ ಕುಲಕರ್ಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net