

ಅರಸೀಕೆರೆ: ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಬುಧವಾರ ಅನಂತ್ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ವಾರ್ಷಿಕ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಅಂತಾರಾಷ್ಟ್ರೀಯ ಮಹಿಳಾ ಅಥ್ಲಿಟ್ ಬಿ.ಎಲ್.ಭಾರತಿ ಮಾತನಾಡಿ, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎಂಬ ಅಂಶವನ್ನು ವಿದ್ಯಾರ್ಥಿಗಳು ಮರೆಯಬಾರದು. ಶಾಲಾ ಮಟ್ಟದಲ್ಲಿ ಜರುಗುವ ಕ್ರೀಡಾಕೂಟಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಆರ್.ಅನಂತಕುಮಾರ್ ಮಾತನಾಡಿದರು. ಕ್ರೀಡಾಪಟು ಎಚ್.ಟಿ.ಮಹದೇವ್, ಪ್ರಾಂಶುಪಾಲ ಬಿ.ಎಚ್ ವಿವೇಕಾನಂದ ಹಾಜರಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.