ಕ್ರೀಡೆಯಿಂದ ಬದುಕಿನಲ್ಲಿ ಚೈತನ್ಯ: ನಾಗರಾಜ ಶೆಟ್ಟಿ ಅನಿಸಿಕೆ

Kin_Sports
Published on

ಸುರತ್ಕಲ್: ಕ್ರೀಡೆಯು ಕ್ರೀಡಾಪಟುಗಳ ಬದುಕಿನಲ್ಲಿ ಚೈತನ್ಯ ಮೂಡಿಸುವ ಹೊಸ ಹೊಸ ಆಲೋಚನೆಗಳನ್ನು ಬೆಳೆಸುವ ಅವಿಭಾಜ್ಯ ಅಂಗ ಎಂದು ಕರ್ನಾಟಕ ಕ್ರೀಡಾ ಭಾರತಿ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು.

ಛತ್ರಪತಿ ಕಬಡ್ಡಿ ತಂಡ, ಯುವಕ ಮಂಡಲ ಪಡುಪದವು ಹಾಗೂ ಕ್ರೀಡಾಭಾರತಿ ಮಂಗಳೂರು ಸಹಯೋಗದಲ್ಲಿ ಪಡುಪದವು ಯುವಕ ಮಂಡಲದ ಮೈದಾನದಲ್ಲಿ ಆಯೋಜಿಸಲಾಗಿದ್ದ ಸುರತ್ಕಲ್ ವಲಯಮಟ್ಟದ ಛತ್ರಪತಿ ಪ್ರಿಮಿಯರ್ ಲೀಗ್-2025 ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಮನಪಾ ಮಾಜಿ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಲಕ್ಷ್ಮೀ ಶೇಖರ ದೇವಾಡಿಗ, ಕಾಟಿಪಳ್ಳ ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಸೂರಿಂಜೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಜಾರಂತಾಯ ಕೇಶವ ಶಿಶುಮಂದಿರದ ನೂತನ ಕಟ್ಟಡ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಮುಂಬೈ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ, ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಭಾರತಿ ಅಧ್ಯಕ್ಷ ಕಾರ್ಯಪ್ಪ ರೈ, ಕಾರ್ಯಕಾರಿಣಿ ಸದಸ್ಯರಾದ ಬೋಜರಾಜ್ ಕಲ್ಲಡ್ಕ, ರಾಮಣ್ಣ ಗೌಡ ಪಾಟೀಲ್ ಮಂಗಳೂರು, ಕಾಪಿಕಾಡು ಕಬಡ್ಡಿ ಅಕಾಡೆಮಿ ಸಂಯೋಜಕ ಗೋಪಿನಾಥ್, ರಾಜಾರಾಮ್ ಸಾಲ್ಯಾನ್ ಪಡುಪದವು, ಪ್ರಶಾಂತ್ ಮುಡಾಯಿಕೊಡಿ, ಹರೀಶ್ ಎಚ್‌ಪಿಸಿಎಲ್, ಗಣೇಶಪುರ ಕೇಶವ ಶಿಶುಮಂದಿರದ ಅಧ್ಯಕ್ಷ ಮಧುಸೂದನ್ ರಾವ್, ಕರುಣಾಕರ ಶೆಟ್ಟಿ ಪಡುಪದವು, ಸೂರಿಂಜೆ ಗ್ರಾಪಂ ಸದಸ್ಯ ದಿವಾಕರ ಶೆಟ್ಟಿ, ಪೆರ್ಮುದೆ ಗ್ರಾಪಂ ಸದಸ್ಯರಾದ ನವೀನ್ ಶೆಟ್ಟಿ, ಅಶೋಕ್ ಭಂಡಾರಿ, ಪಡುಪದವು ಯುವಕ ಮಂಡಲ ಅಧ್ಯಕ್ಷ ಹರೀಶ್ ಭಂಡಾರಿ, ಜ್ಯೋತಿ ವನಿತಾ ಸೇವಾ ಸಮಾಜದ ಅಧ್ಯಕ್ಷೆ ರತ್ನಾ ದೇವದಾಸ್, ಪುಷ್ಪರಾಜ್ ಕಣ್ವತೀರ್ಥ ಮುಂತಾದವರು ಉಪಸ್ಥಿತರಿದ್ದರು.

ಹೇಮಂತ್ ಅಂಚನ್ ಸ್ವಾಗತಿಸಿದರು. ಲೋಕನಾಥ್ ಭಂಡಾರಿ ವಂದಿಸಿದರು. ಹರಿಪ್ರಸಾದ್ ಕುಲ್ಲಂಗಾಲು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net