ಉತ್ತಮ ಆರೋಗ್ಯಕ್ಕೆ ಕ್ರೀಡೆ ಅಗತ್ಯ,  ತರಳಬಾಳು ಕ್ಯಾಂಪಸ್ ನಲ್ಲಿ ಕ್ರೀಡಾಕೂಟ

IMG-20241221-WA0015_1-1.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ತರಳಬಾಳು ಕ್ಯಾಂಪಸ್ ನಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಪಾಲಿಕೆ ಸದಸ್ಯ ಶಿವಕುಮಾರಗೌಡ ರಾಯನಗೌಡ್ರ ಉದ್ಘಾಟಿಸಿದರು.

ಕಾಲೇಜಿನ ಸ್ಥಳಿಯ ಸಲಹಾ ಸಮಿತಿ ಸದಸ್ಯ ಬಸವರಾಜ ತಂಬಾಕದ ಅವರು ಒಲಿಂಪಿಕ್ ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಆರ್.ವಿ. ಪಾಟೀಲ ಅವರು ಮಾತನಾಡಿದರು.

ಕಾಲೇಜಿನ ಅಧ್ಯಕ್ಷ ಶಿವಾನಂದ ಹೆಬಸೂರ ಮಾತನಾಡಿ, ಕ್ರೀಡೆ ಇಲ್ಲದ ಜೀವನ ಕೀಡೆ ತಿಂದಂತೆ. ಹಾಗಾಗಿ ವಿದ್ಯಾರ್ಥಿಗಳಿಗೆ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರಲು ಕ್ರೀಡೆಯ ಮಹತ್ವ ಬಹಳಷ್ಟಿದೆ ಎಂದರು.

ಪ್ರಾಥಮಿಕ ಶಾಲೆಯ ಅಧ್ಯಕ್ಷ ಆರ್.ಎಸ್. ಹನ್ನಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಶಿವಕುಮಾರಗೌಡ ಬಿ.ಜಿ., ಕಾಲೇಜಿನ ಪ್ರಾಚಾರ್ಯ ಮೇಘಾ ಎಂ.ಜೆ. ಉಪನ್ಯಾಸಕರು, ಶಿಕ್ಷಕರು, ಸದಸ್ಯರು ಉಪಸ್ಥಿತರಿದ್ದರು.

ಉಪನ್ಯಾಸಕ ಗಣೇಶ ಮಾಂಡೇಕರ್ ನಿರೂಪಿಸಿದರು. ಬಸವರಾಜ ಕುರ್ತಕೋಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net