ಒತ್ತಡದಿಂದ ಹೊರಬರಲು ಕ್ರೀಡೆ ಅಗತ್ಯ

17 05 2025_BGR RURAL_PAGE_5B
ಹೊಸಕೋಟೆಯ ಚನ್ನಬೈರೇಗೌಡ ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿ ಹೊಸಕೋಟೆ ತಾಲೂಕು ವಕೀಲರ ಸಂದಿಂದ ಆಯೋಜಿಸಿದ ಜಿಲ್ಲಾ ಮಟ್ಟದ ಕ್ರಿಕೆಟ್​ ಪಂದ್ಯಾವಳಿಯನ್ನು ಪ್ರಧಾನ ಸಿವಿಲ್​ ನ್ಯಾಯಾಧೀಶ ಬಿ.ಸತೀಶ ಉದ್ಘಾಟಿಸಿದರು. ತಾಲೂಕು ವಕೀಲರ ಸಂದ ಉಪಾಧ್ಯಕ್ಷ ರವಿಕುಮಾರ್​, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜಂಟಿ ಕಾರ್ಯದರ್ಶಿ ಆನಂದ್​, ಖಜಾಂಚಿ ರುಕ್ಮಿಣಿ, ಮಾಜಿ ಅಧ್ಯಕ್ಷ ವೆಂಕಟಸ್ವಾಮಿ ಇದ್ದರು.
Published on

ಹೊಸಕೋಟೆ : ವಾದ, ಸಾಗಳು, ಒತ್ತಡ ಹಾಗೂ ಜಂಜಾಟದಲ್ಲಿ ಜೀವನ ಸಾಗಿಸುವ ವಕೀಲರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಪ್ರಧಾನ ಸಿವಿಲ್​ ನ್ಯಾಯಾಧೀಶ ಬಿ.ಸತೀಶ ತಿಳಿಸಿದರು.

ನಗರದ ಚನ್ನಬೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ವಕೀಲರ ಕ್ರಿಕೆಟ್​ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ವಕೀಲರ ಸಂದ ಉಪಾಧ್ಯಕ್ಷ ಸಿ.ಎಸ್​.ಗಿರೀಶ್​ ಕುಮಾರ್​ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿ ತೋರಬೇಕು. ಈ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಜಿಲ್ಲೆಯ 17 ತಂಡಗಳು ಭಾಗವಹಿಸಿದ್ದು, ಕ್ರಿಡೆ ಅತ್ಯುತ್ತಮವಾಗಿರಲಿದೆ ಎಂದರು. ಬೆಂಗಳೂರು ವಕೀಲರ ಸಂದ ಖಜಾಂಚಿ ಶ್ವೇತಾ ರವಿಶಂಕರ್​ ಮಾತನಾಡಿ, ಕ್ರೀಡೆ ಭಾಗವಹಿಸುವ ಪ್ರತಿಯೊಬ್ಬರಿಗೂ ಸಹನೆ, ಸಂಯಮ, ಸೌಹಾರ್ದತೆ ಕಲಿಸಲಿದೆ. ನಮ್ಮ ವಕೀಲ ವೃತ್ತಿಯಲ್ಲಿ ಅತ್ಯಗತ್ಯ ಹಾಗೂ ವಕೀಲರು ಒಗ್ಗಟ್ಟು ಪ್ರದರ್ಶನ ನೀಡಲು ಸಹಕಾರಿ ಎಂದರು. ಲಯನ್​ ಕ್ಲಬ್​ ಮಾಜಿ ಅಧ್ಯಕ್ಷ ಮಹೇಶ್​, ಹಿರಿಯ ವಕೀಲರಾದ ಮಂಜುನಾಥ್​, ಹರೀಂದ್ರ, ಸುರೇಶ್​, ನಾಗರಾಜ್​ ಇತರರು ಇದ್ದರು.

ಹೊಸಕೋಟೆ ವಕೀಲರ ಸಂದಿಂದ ಮೊದಲ ಬಾರಿಗೆ ಈ ಕ್ರಿಕೆಟ್​ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಇದರಿಂದ ಜಿಲ್ಲೆಯಾದ್ಯಂತ ವಕೀಲರ ಮಧ್ಯೆ ಉತ್ತಮ ಬಾಂಧವ್ಯ ಮೂಡಲಿದ್ದು, ಮುಂದಿನ ದಿನಗಳಲ್ಲಿ ವಕೀಲರ ಒತ್ತಡ ಜೀವನಕ್ಕೆ ಕೊಂಚ ಸಹಕಾರಿಯಾಗಲಿದೆ. ಇಂತಹ ಕ್ರೀಡಾಕೂಟಗಳನ್ನು ಎಲ್ಲ ಜಿಲ್ಲೆಗಳಲ್ಲಿ ಆಯೋಜಿಸಬೇಕು. | ಕೆ.ರಮೇಶ್​ ವಕೀಲರ ಸಂದ ಅಧ್ಯಕ್ಷ, ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net