

ಗುಳೇದಗುಡ್ಡ: ಮಕ್ಕಳನ್ನು ದೈಹಿಕವಾಗಿ ಬಲಿಷ್ಠಗೊಳಿಸುವುದರ ಜತೆಗೆ ಅವರಲ್ಲಿ ಮಾನಸಿಕ ಏಕಾಗ್ರತೆ ತರವ ಕೆಲಸವನ್ನು ದೈಹಿಕ ಶಿಕ್ಷಕರು ಮಾಡುತ್ತಿದ್ದಾರೆ ಎಂದು ನಿವೃತ್ತ ದೈಹಿಕ ಶಿಕ್ಷಕ ಎಂ.ಆರ್. ಸರಗಣಾಚಾರಿ ಹೇಳಿದರು.
ಪಟ್ಟಣದ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಕ್ರೀಡಾವಿಭಾಗದ ಅಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾಕೂಟ ಪೂರ್ವಭಾವಿ ಸಭೆ ಹಾಗೂ ನಿವೃತ್ತ ದೈಹಿಕ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿ ಉನ್ನತ ಸಾಧನೆ ಮಾಡಲು ಮಾರ್ಗದರ್ಶನ ಮಾಡಬೇಕು ಎಂದರು.
ಎಂಟು ಜನ ನಿವೃತ್ತ ದೈಹಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಾದಾಮಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್. ಬಿ.ಉಳ್ಳಾಗಡ್ಡಿ, ಗುಳೇದಗುಡ್ಡ ತಾಲೂಕು ಘಟಕದ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ಉಳ್ಳಾಗಿಡ್ಡ, ರಾಜು ಪೆಂಡಾರಿ, ಭಾಗ್ಯಮ್ಮ, ಎ.ಬಿ. ಕೋತಿನ, ಭಾರತಿ ನಾಗರಾಳ, ಎಚ್. ಬಿ.ಕೊಳ್ಳಪ್ಪನವರ, ಈರಣ್ಣ ಅಲದಿ ಮತ್ತಿತರರಿದ್ದರು.