ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿ

12Huk1
Published on

ಹುಕ್ಕೇರಿ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಶಾಲೆಯಲ್ಲಿ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕೆಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.

ಪಟ್ಟಣದ ಎಸ್.ಕೆ ಪಬ್ಲಿಕ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಬೌದ್ಧಿಕ ಬೆಳವಣಿಗೆಗೆ ಶಾರೀರಿಕ ಕ್ಷಮತೆ ಅವಶ್ಯ. ಮೊಬೈಲ್, ಟಿವಿ ಹಾವಳಿಯಲ್ಲಿ ಮಕ್ಕಳ ಕ್ರಿಯಾಶೀಲತೆ ಹಾಳಾಗುತ್ತಿದ್ದು, ಪಾಲಕರು ಮಕ್ಕಳ ಆಟೋಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಪಿಂಟು ಶೆಟ್ಟಿ, ಅನಿಲ ಶೆಟ್ಟಿ, ಶಿವಾನಂದ ನೂಲಿ, ಸುರೇಶ ತಾರಳಿ, ಸಂಜಯ ಅಡಕೆ, ಸೋಮಣ್ಣ ಕೋಟಗಿ, ಮಹಾಂತೇಶ ವಸದ, ವೀರೇಶ ಗಜಬರ, ಸೋಮಶೇಖರ ಪರಕನಟ್ಟಿ, ಚನ್ನಪ್ಪ ಗಜಬರ, ಪ್ರಾಚಾರ್ಯರಾದ ಡಾ.ಸರ್ವಮಂಗಳಾ ಕಮತಗಿ, ರಾಘವೇಂದ್ರ ಕುಲಕರ್ಣಿ, ಬಿ.ಬಿ.ಹಿಡಕಲ್ಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net