

ಸಿದ್ದಾಪುರ: ಕ್ರೀಡೆ ಯಾರೊಬ್ಬರ ಸ್ವತ್ತಲ್ಲ. ಯುವಕರು ತಮ್ಮಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ದೈಹಿಕ ಕ್ಷಮತೆಯಿಂದ ಇರಬೇಕಾದರೆ ಕ್ರೀಡೆ ಅತ್ಯವಶ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ಎಂಜಿಸಿ ಮಹಾವಿದ್ಯಾಲಯದ ಸಮೀಪ ಇರುವ ತಾಲೂಕು ಕ್ರೀಡಾಂಗಣದಲ್ಲಿ ಜಿಪಂ, ತಾಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲೂಕು ಯವ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಅಣ್ಣಪ್ಪ ನಾಯ್ಕ ಶಿರಳಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ವಿ. ನಾಯ್ಕ, ಸಿಪಿಐ ಕುಮಾರ ಕೆ., ತಾಪಂ ಸಹಾಯಕ ನಿರ್ದೇಶಕ ದಿನೇಶ ಇ.ಡಿ., ಕೋಲಸಿರ್ಸಿ ಗ್ರಾಪಂ ಪಿಡಿಒ ಸುಬ್ರಹಣ್ಯ ಹೆಗಡೆ, ಇಟಗಿ ಗ್ರಾಪಂ ಸದಸ್ಯ ಸುರೇಂದ್ರ ಗೌಡ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಇತರರಿದ್ದರು. ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಮಾಧವ ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ನಾಯ್ಕ ವಂದಿಸಿದರು.