ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಅತ್ಯಗತ್ಯ

IMG-20231008-WA0120
Published on

ಆಲೂರು: ಮನುಷ್ಯನ ಪ್ರವೃತ್ತಿಗಳಲ್ಲಿ ಪ್ರಧಾನ ಪಾತ್ರ ವಹಿಸುವ ಕ್ರೀಡೆಗಳು, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.


ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಲೂರು ತಾಲೂಕಿನ ಫೋಟೋಗ್ರಾಫರ್ಸ್‌ ಸಂಘದ ವತಿಯಿಂದ ಸೊಮವಾರ ಆಯೋಜಿಸಿದ್ದ ಮಲ್ನಾಡ್ ಕಪ್(ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ, ಮಾತನಾಡಿದರು.


ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ವ್ಯವಸಾಯದಲ್ಲಿ ತೊಡಗಿಕೊಂಡು ಉತ್ತಮ ಆಹಾರ ಸೇವಿಸಿ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಮನುಷ್ಯ ಹಲವು ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಮನುಷ್ಯ ಆರೋಗ್ಯವಾಗಿರಲು ಉತ್ತಮ ಆಹಾರದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅನಿವಾರ್ಯ ಎಂದರು.


ಆಲೂರು ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್, ಖಜಾಂಚಿ ಹೇಮಂತ್, ಟಿಎಪಿಸಿಎಂಎಸ್ ನಿರ್ದೇಶಕ ಮಾವನೂರು ಮೋಹನ್, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ನಾಗರಾಜ್ ಕ್ಯಾಂಟಿನ್, ಬೈರಾಪುರ ಪಂಚಾಯಿತಿ ಸದಸ್ಯರಾದ ನಂಜುಂಡಪ್ಪ, ರುದ್ರೇಗೌಡ, ಬಿಜೆಪಿ ಮುಖಂಡರಾದ ಹನುಮಂತೇಗೌಡ, ಕಿರಣ್, ನಟರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net