

ಹೊನ್ನಾಳಿ: ವಿದ್ಯಾರ್ಥಿಗಳ ಭೌತಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಅವಶ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಂಜರಾಜ್ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ತೊಡಗಿಕೊಂಡರೆ ಸದಾ ಕ್ರಿಯಾಶೀಲ, ಲವಲವಿಕೆಯಿಂದ ಇರಲು ಸಾಧ್ಯ. ಸ್ಪರ್ಧೆಯಲ್ಲಿ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಸೋಲು- ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಬಿಆರ್‌ಸಿ ತಿಪ್ಪೇಶಪ್ಪ ಮಾತನಾಡಿ, ಏಕಾಗ್ರತೆ ಕಾಪಾಡಿಕೊಂಡರೆ ನಾವು ಗೆಲ್ಲಬಹುದು. ಆದರೆ, ಗುರಿ ತಲುಪಲು ಏಕಾಗ್ರತೆ ಮುಖ್ಯ ಎಂದರು.
ತಾಲೂಕು ದೈಹಿಕ ನಿರ್ದೇಶಕ ಈಶ್ವರಪ್ಪ, ಹೊನ್ನಾಳಿ- ನ್ಯಾಮತಿ ತಾಲೂಕುಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲ್, ನಿಂಗಪ್ಪ, ಪ್ರಾಥಮಿಕ ಶಾಲೆಯ ಅಧ್ಯಕ್ಷ ನೀಲಮ್ಮ ಇತರರಿದ್ದರು.