ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅವಶ್ಯ

5 LKR PH 1
Published on

ಲಕ್ಕೂರು: ಮಾನಸಿಕ, ದೈಹಿಕ ಆರೋಗ್ಯ ಪಡೆಯಲು ಕ್ರೀಡೆಗಳು ಅವಶ್ಯ, ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ವ್ಯವಸಾಯದಲ್ಲಿ ತೊಡಗಿಕೊಂಡು ಉತ್ತಮ ಆಹಾರ ಸೇವಿಸಿ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಮನುಷ್ಯ ಹಲವು ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಈ ನಿಟ್ಟಿನಲ್ಲಿ ಆರೋಗ್ಯ ಜೀವನಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆ ಎಂದು ಚಿಕ್ಕತಿರುಪತಿ ಗ್ರಾಪಂ ಪಿಡಿಒ ಹರೀಂದ್ರಗೋಪಾಲ್​ ಹೇಳಿದರು.

ಮಾಲೂರು ತಾಲೂಕು ಲಕ್ಕೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಹೋಬಳಿಮಟ್ಟದ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರೂ ದೈಹಿಕವಾಗಿ ರೂಪುಗೊಂಡಾಗ ಮಾತ್ರ ಮಾನಸಿಕವಾಗಿ ಏನು ಬೇಕಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಕ್ರೀಡೆ ಅತಿ ಪ್ರಮುಖವಾಗಿದೆ. ಮನುಷ್ಯನು ಕ್ರೀಡೆ ಮುಂತಾದ ದೈಹಿಕ ಹಾಗೂ ಮಾನಸಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆಸ್ಪತ್ರೆಯನ್ನು ದೂರ ಮಾಡಬಹುದು. ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯು ಇನ್ನಷ್ಟು ಉತ್ತಮವಾಗುತ್ತದೆ. ಕ್ರೀಡೆಗಳಿಂದ ಬುದ್ದಿ ಚುರಾಕಾಗುತ್ತದೆ ಎಂದರು.

3 ದಿನ ನಡೆಯುವ ಕ್ರೀಡಾ ಕೂಟದಲ್ಲಿ ಪ್ರಥಮವಾಗಿ 100, 200, 500, 1000 ಮೀಟರ್​ ಓಟದ ಸ್ಪರ್ಧೆಗಳನ್ನು ಪ್ರಾರಂಭಿಸಲಾಯಿತು. ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ, ಬೇಸ್​ ಬಾಲ್​, ಥ್ರೋ ಬಾಲ್​, ಆಟಗಳನ್ನು ಆಡಿಸಲಾಯಿತು. ಲಕ್ಕೂರು ಹೋಬಳಿಯ ಲಕ್ಕೂರು, ಚಿಕ್ಕತಿರುಪತಿ ಹಾಗೂ ಡಿ.ಎನ್​.ದೊಡ್ಡಿ ಕ್ಲಸ್ಟರ್​ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಖಾಸಗಿ ಶಾಲೆಗಳು ಸೇರಿ ಸುಮಾರು 25ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.

ಲಕ್ಕೂರು ಗ್ರಾಪಂ ಸದಸ್ಯ ಶ್ರೀಧರ್​ರೆಡ್ಡಿ, ಸ.ನೌ.ಪ್ರಧಾನ ಕಾರ್ಯದರ್ಶಿ ರವಿ, ಪ್ರಾ.ಶಾ.ಶಿ. ಸಂಘದ ಉಪಾಧ್ಯಕ್ಷ ಭಗವತ್​ಸಿಂಗ್​, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸುಧಾಕರ್​, ಕಾಲೇಜು ಉಪನ್ಯಾಸಕ ಶಂಕರ್​, ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ನಾಗಪ್ಪ, ಡಿಎಸ್​ಎಸ್​ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್​.ವೆಂಕಟೇಶ್​, ಉಪ ಪ್ರಾಂಶುಪಾಲ ಅಲೀಂಉನ್ನಿಸಾ, ಮುಖ್ಯಶಿಕ್ಷಕರಾದ ವೇಣುಗೋಪಾಲ್​, ವೆಂಕಟೇಶ್​, ವೆಂಕಟಪತಿ, ಸಿಆರ್​ಪಿಗಳಾದ ಎನ್​. ಚಂದ್ರಶೇಖರ್​, ವೆಂಕಟೇಶ್​, ವಿ.ಭಾರತಿ ಇದ್ದರು.

5 ಎಲ್ಕೆಆರ್​ 1

ಲಕ್ಕೂರು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಹೋಬಳಿಮಟ್ಟದ ಕ್ರೀಡಾಕೂಟವನ್ನು ಗ್ರಾಪಂ ಅಧ್ಯಕ್ಷೆ ಚೈತ್ರಾ ರಮೇಶ್​ ಉದ್ಘಾಟಿಸಿದರು. ಚಿಕ್ಕತಿರುಪತಿ ಗ್ರಾಪಂ ಅಧ್ಯಕ್ಷ ಜಿ.ವಿ.ಮಂಜುನಾಥ್​, ಉಪಾಧ್ಯಕ್ಷೆ ಪದ್ಮಾ ವೆಂಕಟೇಶ್​, ಎಸ್​ಡಿಎಂಸಿ ಅಧ್ಯಕ್ಷ ಸಿ.ಪುರುಷೋತ್ತಮ, ಗ್ರಾಪಂ ಎಸ್​ಡಿಎ ನಾಗರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net