

ಮಹಾಲಿಂಗಪುರ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಶಾರೀರಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಮುಧೋಳ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಎಸ್.ಎಂ. ಕುರಣಿ ಹೇಳಿದರು.
ರನ್ನಬೆಳಗಲಿಯ ಜ್ಞಾನಗುರುಕುಲ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಅವಶ್ಯಕವಾಗಿದೆ. ದೈಹಿಕ ಶಿಕ್ಷಣದಲ್ಲಿ ಸ್ವಯಂ ಕಲಿಕೆ ಇದೆ. ಓದಿನಲ್ಲಿ ಮುಂದಿರುವ ವ್ಯಕ್ತಿ ಹುದ್ದೆ ಸಂಪಾದಿಸಿ ಆರ್ಥಿಕವಾಗಿ ಸದೃಢನಾಗಬಹುದು. ಒಬ್ಬ ಉತ್ತಮ ಮತ್ತು ಕರ್ತವ್ಯನಿಷ್ಠ ಕ್ರೀಡಾಪಟು ಜಗತ್ತನ್ನೇ ಆಳಬಲ್ಲ ಎಂದರು.
ಓಂ ಬಸವಾ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಸ್. ತೆಗ್ಗಿನಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಯಮಿತವಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಆರೋಗ್ಯ ಕಾಯ್ದುಕೊಳ್ಳಬಹುದು ಎಂದರು.
ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ದೈಹಿಕ ಶಿಕ್ಷಕರಾದ ಅಶೋಕ ಪಾಟೀಲ, ಸಿದ್ದು ಉಳ್ಳಾಗಡ್ಡಿ ಮಾತನಾಡಿದರು.
ಕಾನಿಪ ಸಂಘದ ಜಿಲ್ಲಾ ಸದಸ್ಯ ಎಸ್.ಎಸ್. ಈಶ್ವರಪ್ಪಗೋಳ, ಸಂಸ್ಥೆ ಕಾರ್ಯದರ್ಶಿ ಎಸ್.ಕೆ. ಹಿರೇಮಠ, ಮುಖ್ಯಶಿಕ್ಷಕಿ ಪಿ.ಎಸ್.ಹಿರೇಮಠ, ವಿ.ಎಸ್.ಹಿರೇಮಠ ಮತ್ತಿತರರಿದ್ದರು.
ಶಿಕ್ಷಕಿ ಸ್ನೇಹಾ ಮಾದಪ್ಪನವರ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಶ್ರೇಯಾ ಮದಲಮಟ್ಟಿ ಸ್ವಾಗತಿಸಿದರು. ಶಿಕ್ಷಕ ಆನಂದ ತಮದಡ್ಡಿ ನಿರೂಪಿಸಿದರು. ಶಿಕ್ಷಕ ಎಸ್.ಎಲ್. ಕುಂಬಾರ ವಂದಿಸಿದರು.