ಸದೃಢ ದೇಹಕ್ಕೆ ಕ್ರೀಡೆ ಅತ್ಯಗತ್ಯ

Sports are essential for a healthy body.
ಮಹಾಲಿಂಗಪುರ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಅಂತಾರಾಜ್ಯ ಅಪ್ಪು ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ ಉದ್ಘಾಟಿಸಿದರು. ಧರೆಪ್ಪ ಸಾಂಗಲಿಕರ,ಬಲವಂತಗೌಡ ಪಾಟೀಲ ಇತರರಿದ್ದಾರೆ.
Published on

ಮಹಾಲಿಂಗಪುರ: ಸದೃಢ ಶರೀರಕ್ಕೆ ಕ್ರೀಡೆ ಅತ್ಯವಶ್ಯಕವಾಗಿದ್ದು, ಯುವಕರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲಿಕರ ಹೇಳಿದರು.

ಮಹಾಲಿಂಗಪುರ ಕ್ರಿಕೆಟ್ ಕ್ಲಬ್ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಜ್ಯ ಅಪ್ಪು ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿದ ಅವರು, ಆರೋಗ್ಯವಂತ ಯುವಕರು ಈ ದೇಶದ ಆಸ್ತಿ ಎಂದರು. ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ ಕಾರ್ಯಕ್ರಮ ಉದ್ಘಾಟಿಸಿದರು.

ಜಮ್ಮು ಮತ್ತು ಕಾಶ್ಮೀರ ಪೂಂಚ್ ಗಡಿಯಲ್ಲಿ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಮಹಾಲಿಂಗಪುರ ಪಟ್ಟಣದ ಯೋಧ ಮಹೇಶ ಮರಿಗೊಂಡ ಸೇರಿ ಹುತಾತ್ಮರಾದ ಐವರು ಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಣೆ ಮಾಡಲಾಯಿತು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಲವಂತಗೌಡ ಪಾಟೀಲ, ಪ್ರಕಾಶ ಕರ್ಲಟ್ಟಿ, ಶ್ರೀಕಾಂತ ಮಾಗಿ, ಶಿವಶಂಕರ ಗುಜ್ಜರ, ಬಸವರಾಜ ರಾಯರ, ರಾಜು ಯಡಹಳ್ಳಿ, ಶ್ರೀಶೈಲ ಚನ್ನನವರ, ಮಹಾಂತೇಶ ನಸಲಕರ, ಮೀರಾ ತಟಗಾರ, ಬಾಲಕೃಷ್ಣ ಮಾಳವದೆ, ಮಹಾಲಿಂಗಪ್ಪ ಮಾಳಿ, ಬಸವರಾಜ ಘಟ್ನಟ್ಟಿ, ಅಶೋಕ ಅಂಗಡಿ, ಯಾಸೀನ್ ಪಾಂಡು, ರಾಜು ಶೆಟ್ಟರ್, ಅವನೇಶ ಜಾಧವ, ಪರಶುರಾಮ ಪಾತ್ರೋಟ ಮತ್ತಿತರರಿದ್ದರು.

ಮಹಾದೇವ ಕಡಬಲ್ಲವರ ಸ್ವಾಗತಿಸಿದರು. ಲಕ್ಷ್ಮಣ ಕಿಶೋರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net