ಕ್ರೀಡೆ ಜೀವನದ ಅವಿಭಾಜ್ಯ ಅಂಗ

Sports are an integral part of life.
Published on

ವಿಜಯಪುರ:ಆಧುನಿಕತೆಯ ಯಾಂತ್ರಿಕ ಬದುಕಿನಲ್ಲಿ ಎಲ್ಲರೂ ದೈಹಿಕ ಚಟುವಟಿಕೆಗಳನ್ನು ಮರೆಯುತ್ತಿದ್ದಾರೆ. ಪ್ರತಿಯೊಬ್ಬರು ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳತ್ತ ಆಸಕ್ತಿ ತೋರಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಪ್ರಾಚಾಯೆರ್ ಡಾ. ಆರ್​.ಎಂ. ಮಿರ್ಧೆ ಹೇಳಿದರು.ನಗರದ ಬಿಎಲ್​ಡಿಇ ಸಂಸ್ಥೆಯ ಎಸ್​ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಕ್ರೀಡಾ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿ ವರ್ಷ ಆ. 29 ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ. ಹಾಕಿ ಮಾಂತ್ರಿಕ, ಭಾರತದ ಶ್ರೇಷ್ಠ ಹಾಕಿ ಆಟಗಾರ ಮೇಜರ್​ ಧ್ಯಾನಚಂದ್​ ಸಿಂಗ್​ 1905 ಆ. 29 ರಂದು ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಜನಿಸಿದರು. ಇವರ ಜನ್ಮ ದಿನಾಚರಣೆ ಹಿನ್ನೆಲೆ ಪ್ರತಿ ವರ್ಷವು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಕ್ರೀಡಾ ದಿನ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಉಪ ಪ್ರಾಚಾರ್ಯ ಡಾ. ಅನೀಲ ನಾಯಕ, ಐಕ್ಯೂಎಸಿ ನಿರ್ದೇಶಕ ಪಿ.ಎಸ್​. ಪಾಟೀಲ, ದೈಹಿಕ ನಿರ್ದೇಶಕ ಎಸ್​.ಕೆ. ಪಾಟೀಲ, ಉಪ ಪ್ರಾಚಾರ್ಯ ವಿ.ಎಸ್​. ಡೊಣಗಾಪುರ, ತರನ್ನುಮ ಜಬೀನ್​ಖಾನ, ರೂಪಾ ಮೋಟಗಿ, ಮಲಿಕ್​ ಜಮಾದಾರ, ಎಂ.ಎಸ್​. ಜೇವೂರ, ಸುರೇಶ. ಜಿಂಜರವಾಡ, ಈರಣ್ಣ ಕಂಠೆಣ್ಣವರ ಮತ್ತಿತರರಿದ್ದರು.

* ಫೋಟೋ : ಎಂಎಂ 29&13

ವಿಜಯಪುರದ ಎಸ್​ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ಡಾ. ಆರ್​.ಎಂ. ಮಿರ್ಧೆ, ಡಾ. ಅನೀಲ ನಾಯಕ, ಪಿ.ಎಸ್​. ಪಾಟೀಲ, ಎಸ್​.ಕೆ. ಪಾಟೀಲ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net