

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಹಾಗೂ ಎನ್‌ಎಸ್‌ಎಸ್ ಘಟಕ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಹಾಗೂ ಕಲೆ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ ಎಂದರು.
ಗುರುಮೂರ್ತಯ್ಯ ಕಾಡದೇವರಮಠ, ಪ್ರಾಚಾರ್ಯ ಪರಪ್ಪ ಮಗದುಮ್ಮ ಮಾತನಾಡಿದರು. ಪ್ರಾಚಾರ್ಯ ಸುರೇಶ ನಾಯಿಕ, ಗ್ರಾಪಂ ಉಪಾಧ್ಯಕ್ಷ ಅರ್ಜುನ ಪೂಜಾರಿ, ಲಕ್ಷ್ಮಣ ಮಗರ, ಡಿ.ಎಸ್.ಹುಲ್ಲೆಣ್ಣವರ, ಕೆ.ಟಿ.ಶೇಡಶ್ಯಾಳ, ಚಿದಾನಂದ ಮಗದುಮ್ಮ, ಪಾರೀಸ್ ಕಾಂಬಳೆ, ಪಾಂಡು ಚವ್ಹಾಣ, ರತ್ನಪ್ಪ ಅಂಬಾಜಿ, ಗೌರವ್ವ ಮೂಲಿನಮನಿ, ಮೀನಾಕ್ಷಿ ನಂದೇಶ್ವರ, ಸುಧಾರಾಣಿ ನೇಮಗೌಡ, ಭಾಗ್ಯಶ್ರೀ ಕಟಾಳೆ, ಸುಶ್ಮಿತಾ ಸೊನಕರ ಇತರರಿದ್ದರು.