ಒತ್ತಡ ನಿವಾರಣೆಗೆ ಕ್ರೀಡಾ ಚಟುವಟಿಕೆ ಸಹಕಾರಿ

Sports activity helps relieve stress
ವಿಜಯಪುರ ನಗರದ ಪೊಲೀಸ್​ ಪರೇಡ್​ ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್​ ವಾರ್ಷಿಕ ಕ್ರೀಡಾಕೂಟದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಧ್ವಜ ವಂದನೆ ಸ್ವೀಕರಿಸಿದರು. ಎಸ್​ಪಿ ಲಕ್ಷ$್ಮಣ ನಿಂಬರಗಿ, ಅರವಿಂದ ಹಾಗರಗಿ, ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜನರ ರಣೆ&ಶಾಂತಿ ಸುವ್ಯವಸ್ಥೆ ಕಾರ್ಯದಲ್ಲಿ ತೊಡಗಿರುವ ಪೊಲೀಸ್​ ಅಧಿಕಾರಿ&ಸಿಬ್ಬಂದಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಒತ್ತಡ ನಿವಾರಿಸಿಕೊಂಡು ಮತ್ತೆ ಕಾಯೋರ್ನ್ಮುಖರಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಹೇಳಿದರು.

ನಗರದ ಪೊಲೀಸ್​ ಪರೇಡ್​ ಮೈದಾನದಲ್ಲಿ ಶನಿವಾರ ನಡೆದ "ಜಿಲ್ಲಾ ಪೊಲೀಸ್​ ವಾರ್ಷಿಕ ಕ್ರೀಡಾಕೂಟ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಗಳಿಂದ ದೇಹ ಸದೃಢತೆಯೊಂದಿಗೆ ಮಾನಸಿಕ ಸದೃಢತೆ ಕಾಯ್ದುಕೊಳ್ಳಲು ಸಾಧ್ಯ. ಆರೋಗ್ಯಯುತ ಹಾಗೂ ಕ್ರಿಯಾಶೀಲತೆಯಿಂದಿರಲು ನಿರಂತರವಾಗಿ ಕ್ರೀಡೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಕ್ರೀಯಾಶೀಲ ಮನಸ್ಸನ್ನು ಹೊಂದಲು ಸಾಧ್ಯ. ಆರೋಗ್ಯಕರ ಮನಸ್ಸನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲು&ರಾತ್ರಿಯೆನ್ನದೇ, ದಿನದ 24 ಗಂಟೆಗಳ ಕಾಲ ಜನರ ಭದ್ರತೆಗಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್​ ಇಲಾಖೆಯ ಕಾರ್ಯದೊಂದಿಗೆ, ತಮ್ಮ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಹೆಚ್ಚೆಚ್ಚು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಆತ್ಮ ವಿಶ್ವಾಸ, ಸಾಮಾಜಿಕ ಸಂವಹನ ಕೌಶಲ, ಶಿಸ್ತು, ನಾಯಕತ್ವದ ಗುಣ ಬೆಳೆಯುತ್ತದೆ ಎಂದರು.

ಎಸ್​ಪಿ ಲಕ್ಷ$್ಮಣ ನಿಂಬರಗಿ ಮಾತನಾಡಿ, ಕ್ರೀಡಾಕೂಟಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಸೋಲು&ಗೆಲುವನ್ನು ಲೆಕ್ಕಿಸದೇ ಸ್ಪೂರ್ತಿ, ಚೈತನ್ಯದಿಂದ ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ಎಎಸ್​ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಸೈನಿಕ ಶಾಲೆಯ ಪ್ರಾಂಶುಪಾಲ ಗ್ರುಪ್​ ಕ್ಯಾಪ್ಟನ್​ ಪ್ರತಿಭಾ ಬಿಷ್ಟ, ಎನ್​ಸಿಸಿ ಅಧಿಕಾರಿ ಗಿರೀಶ ಶಿಂಧೆ, ಕೇಂದ್ರ ಕಾರಾಗೃಹದ ಅಧೀಕ ಬಿ.ಎಂ. ಕೊಟ್ರೇಶ ಮತ್ತಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ವಿಜೇತರು ಕ್ರೀಡಾ ಜ್ಯೋತಿಯನ್ನು ನೀಡುವುದರ ಮೂಲಕ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಕ್ರೀಡಾಪಟುಗಳಿಂದ ಪ್ರತಿಾ ವಿಧಿ ಸ್ವೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net