

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಬಿ ಗ್ರುಪ್ ಪದವಿಪೂರ್ವ ಕಾಲೇಜು ಅಥ್ಲೇಟಿಕ್ ಕ್ರೀಡಾಕೂಟ ಜರುಗಿತು.
ಕಾರ್ಯಕ್ರಮದ ಕ್ರೀಡಾಧ್ವಜ ನೆರವೇರಿಸಿ ಮಾತನಾಡಿದ ಜಯದೇವ ಮೆಣಸಗಿ, ವಿದ್ಯಾಥಿರ್ಗಳು ಕ್ರೀಡಾ ಮನೋಭಾವ ಹೊಂದಬೇಕು. ಸದೃಢ ಮನುಸ್ಸು ಮತ್ತು ದೇಹವನ್ನು ಹೊಂದಿ ಕ್ರೀಡೆಯಲ್ಲಿ ಭಾಗವಹಿಸಬೇಕು. ತಾಲೂಕ, ಜಿಲ್ಲಾ ಹಾಗೂ ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಸ್ಪಧಿರ್ಸಿ ಜಿಲ್ಲೆಗೆ ತರಬೇಕು ಎಂದರು.
ಪ್ರೊ. ಎಸ್.ಬಿ. ಹಾವೇರಿ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕ್ರೀಡಾಕೂಟದಲ್ಲಿ ಸೋಲು ಗೆಲವು ಪ್ರಮುಖವಲ್ಲ. ಕ್ರೀಡೆಯಲ್ಲಿ ಭಾಗವಹಿಸುವ ಜೊತೆಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್.ಜಿ. ಪಾಟೀಲ, ಪವನಕುಮಾರ ಶೇಟ್ ಕ್ರೀಡಾಜ್ಯೋತಿ ಬರಮಾಡಿಕೊಂಡರು.
ರಮೇಶ ಗಂಗಾಪುತ್ರ, ಎಸ್. ಎನ್. ಎತ್ತಿನಮನಿ, ಕೆ. ಎಂ. ರಾಠೋಡ, ಪರಶುರಾಮ ಗುಡಿಮನಿ, ಎಸ್.ಬಿ. ಹಿರೇಮಠ, ಕಾವೇರಿ ದೊಡ್ಡಮನಿ ಇತರರು ಇದ್ದರು.