ಕ್ರೀಡೆ ವಿದ್ಯಾಥಿರ್ಗಳಲ್ಲಿ ನಾಯಕತ್ವದ ಗುಣ ಬೆಳಸುತ್ತದೆ: ಡಾ. ಶಿವಪ್ಪ ಕುರಿ

02GDG06
ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕೆ. ಎಚ್​. ಪಾಟೀಲ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗುಂಡು ಎಸೆಯುವ ಮೂಲಕ ಡಾ. ಶಿವಪ್ಪ ಕುರಿ ವಾಷಿರ್ಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಡಾ. ಸುದಾ ಕೌಜಗೇರಿ, ಡಾ. ಎಂ. ವೈ. ಜಟ್ಟೆಣ್ಣವರ, ಡಾ. ಬಸವರಾಜ ಅಂಬಿಗೇರ, ಪ್ರೊ. ರಮೇಶ ಹುಲಕುಂದ, ಡಾ. ಪ್ರಬಲ ರೊಡ್ಡಣ್ಣವರ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕ ಬೆಳವಣಿಗೆಗೆ ಅನುಕೂಲದ ಜೊತೆಗೆ ವಿದ್ಯಾಥಿರ್ಗಳಲ್ಲಿ ಹೊಸ ಚೈತನ್ಯ ಬರುತ್ತದೆ. ಓದಿನಲ್ಲಿ ಉತ್ತಮ ಅಂಕಗಳಿಸಲು ಸಹಕಾರಿಯಾಗುವುದರ ಮೂಲಕ ಕ್ರೀಡೆ ವಿದ್ಯಾಥಿರ್ಗಳಲ್ಲಿ ನಾಯಕತ್ವಗುಣ ಬೆಳೆಸುತ್ತದೆ ಎಂದು ಪ್ರಾಚಾರ್ಯ ಡಾ. ಶಿವಪ್ಪ ಕುರಿ ಹೇಳಿದರು.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ಕೆ. ಎಚ್​. ಪಾಟೀಲ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲಿ ಮಂಗಳವಾರ ಜರುಗಿದ ವಾಷಿರ್ಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯುವ ಕ್ರೀಡಾ ಉತ್ಸಾಹಿ ಕ್ರೀಡಾಪಟುಗಳು ಕ್ರೀಡೆ ಮತ್ತು ಆಟಗಳಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾಥಿರ್ಗಳಿಗೆ ಇದು ಮೊದಲ ವೇದಿಕೆಯಾಗಿದೆ ಎಂದು ಹೇಳಿದರು.
ಡಾ. ಅಪ್ಪಣ್ಣ ಹಂಜೆ ಮಾತನಾಡಿ ಅರ ಜ್ಞಾನದ ಜತೆಗೆ ಆಟಗಳು ಮತ್ತು ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗಗಳು. ಹಾಗಾಗಿ ವಿದ್ಯಾಥಿರ್ಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇಂತಹ ಕ್ರೀಡಾ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡಾ ಪಟುಗಳಿಗೆ ಕ್ರೀಡೆಗಳ ಕುರಿತು ಮಾಹಿತಿ ನೀಡಿದರು.
ಡಾ. ಸುದಾ ಕೌಜಗೇರಿ, ಡಾ. ಎಂ. ವೈ. ಜಟ್ಟೆಣ್ಣವರ, ಡಾ. ಬಸವರಾಜ ಅಂಬಿಗೇರ, ಪ್ರೊ. ರಮೇಶ ಹುಲಕುಂದ, ಡಾ. ಪ್ರಬಲ ರೊಡ್ಡಣ್ಣವರ, ಪ್ರೊ. ಸಂಗೀತಾ ಕಲಾಲ, ಪ್ರೊ. ಎಂ. ಎ. ನವಲಗುಂದ, ಪ್ರೊ. ಮಹಾನಂದಾ ಹಿರೇಮಠ, ಪ್ರೊ. ಪ್ರಶಾಂತ ಹುಲಕುಂದ, ಪ್ರೊ. ಗಣೇಶ ಧೊಂಗಡಿ, ಪ್ರೊ. ಶ್ವೇತಾ ಪಾಲನಕರ, ಪ್ರೊ. ಶಶಿಕುಮಾರ ಎನ್​.ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net