

ಬೆಳಗಾವಿ: ಭಾರತ ವಿಶ್ವಗುರುವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಹುಟ್ಟುಹಾಕಿದ್ದು, ಕ್ರೀಡೆಗೆ ಹೆಚ್ಚಿನ ಸೂರ್ತಿ ನೀಡುತ್ತಿದೆ. ಗೆಲುವು ಸಾಧನೆಯಲ್ಲ, ಭಾಗವಹಿಸುವುದು ಸಾಧನೆ. ಭಾರತದ ಯುವಕ್ರೀಡಾಪಟುಗಳು ವಿದೇಶಗಳಲ್ಲಿ ಭಾಗವಹಿಸುವಂತಾಗಬೇಕು. ಅಂದಾಗ ಕ್ರೀಡೆಗೆ ಮಹತ್ವ ಬರುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕೆಎಲ್‌ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ್ ಕಾಲೇಜು ುಟ್‌ಬಾಲ್ ಲಿಂಗರಾಜ ಕಪ್ ಸೀಸನ್-2 ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ಅಕಾಡೆಮಿ ಸ್ಥಾಪಿಸುವುದು ಕೆಎಲ್‌ಇ ಸಂಸ್ಥೆಯ ಗುರಿಯಾಗಿದೆ. ಅದನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು. ಲಿಂಗರಾಜ ಕಾಲೇಜು ುಟ್‌ಬಾಲ್ ಪಂದ್ಯಾವಳಿ ಆಯೋಜಿಸಿ ಉತ್ತೇಜಿಸಿದೆ. ಕಾಲೇಜು ಅನೇಕ ಯೂನಿವರ್ಸಿಟಿ ಬ್ಲೂಗಳನ್ನು ರೂಪಿಸಿರುವುದು ಅಭಿನಂದನೀಯ ಎಂದರು.
ಭಾರತ ಸರ್ಕಾರ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಖೇಲೋ ಇಂಡಿಯಾ ಯುವ ಕ್ರೀಡಾಪಟುಗಳಿಗೆ ಒಂದು ವೇದಿಕೆ ಕಲ್ಪಿಸಿದೆ. ಅದರ ಪ್ರಯೋಜನ ಪಡೆದು ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಬೇಕಾಗಿದೆ. ಕೆಎಲ್‌ಇ ಸಂಸ್ಥೆಯು ಕ್ರೀಡೆಗಾಗಿ ಹೆಚ್ಚು ಆದ್ಯತೆ ನೀಡಿದೆ. ಅನೇಕ ಕ್ರೀಡಾಪಟುಗಳನ್ನು ತರಬೇತುಗೊಳಿಸಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ತೊಡಗಿಸಿ ಸಾಧನೆಗೈದಿದೆ ಎಂದರು.
ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್, ಡಾ.ರೀಚಾರಾವ್, ವಿನಾಯಕ ವರೂಟೆ ಹಾಗೂ ಪ್ರಾಯೋಜಕತ್ವ ನೀಡಿದ ರಾಯಲ್ ಮಂಡಿ, ಲಾನ್ಸ್ ಸ್ಪೋರ್ಟ್ಸ್, ಮಥಿನ್ ಇನಾಮದಾರ, ಟೀ ಟೋಸ್ಟ್ ಕಂಪನಿ ಅಕ್ಷಯ ಕಠಾರಿಯಾ, ಮಿಂಟ್ ಮೀಡಿಯಾದ ಪ್ರಮುಖರು ಇದ್ದರು.
ಕೊಲ್ಲಾಪುರ, ಗಡಿಗ್ಲಂಜ್, ಧಾರವಾಡದ ನ್ಯಾಷನಲ್ ಾರೆನ್ಸಿಕ್ ಸೈನ್ಸ್ ವಿವಿ, ಬೆಳಗಾವಿ ಮೊದಲ್ಗೊಂಡು 20 ತಂಡಗಳು ಪಾಲ್ಗೊಂಡಿದ್ದವು. ಖುಷಿ ಹರದಿ ಪ್ರಾರ್ಥಿಸಿದರು. ಸಂಸ್ಕೃತಿ ನಾಯರ ನಿರೂಪಿಸಿದರು. ಸಮೃದ್ಧಿ ಕುಡಚಿ ವಂದಿಸಿದರು.