ಕ್ರೀಡಾಕೂಟದಲ್ಲಿ ವಿದ್ಯಾವಾರಿಧಿ ಶಾಲೆ ಸಮಗ್ರ ಪ್ರಶಸ್ತಿ

HUN-SEP-9-4(VIDYA VARIDHI SCHOOL BILIKERE)
ಹುಣಸೂರು ತಾಲೂಕು ಬಿಳಿಕೆರೆ ವಲಯ ವಿಭಾಗದ ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಬಿಳಿಕೆರೆ ವಿದ್ಯಾವಾರಿಧಿ ಶಾಲೆ ಸಮಗ್ರ ಪ್ರಶಸ್ತಿಗೆ ಭಾಜನವಾಗಿದ್ದು, ಸಾಧಕ ಕ್ರೀಡಾಪಟುಗಳೊಂದಿಗೆ ಶಾಲೆ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.
Published on

ಹುಣಸೂರು: ಬಿಳಿಕೆರೆ ವಲಯ ವ್ಯಾಪ್ತಿಯ 2025-26ನೇ ಸಾಲಿನ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಬಿಳಿಕೆರೆ ಗ್ರಾಮದ ವಿದ್ಯಾವಾರಿಧಿ ಶಾಲೆ ಸಮಗ್ರ ಪ್ರಶಸ್ತಿ ಗಳಿಸಿದೆ.

ಬಾಲಕರ ವಿಭಾಗದಲ್ಲಿ ಪಿ.ಅರಣ್ ಉದ್ದ ಜಿಗಿತ, ಗುಂಡು ಎಸೆತ ಮತ್ತು ತಟ್ಟೆ ಎಸೆತದಲ್ಲಿ ಪ್ರಥಮ, ಪ್ರೀತಮ್ 100 ಮೀಟರ್ ಮತ್ತು 200 ಮೀ. ಓಟದಲ್ಲಿ ದ್ವಿತೀಯ, ವಿಜಯ್ 400 ಮೀ. ಓಟ ಮತ್ತು ಎತ್ತರ ಜಿಗಿತದಲ್ಲಿ ದ್ವಿತೀಯ, ಪಂಕಜ್ 600 ಮೀ. ಓಟದಲ್ಲಿ ದ್ವಿತೀಯ, 4*100 ಮೀ. ರಿಲೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಥ್ರೋಬಾಲ್‌ನಲ್ಲಿ ಶಾಲೆಯ ತಂಡ ಪ್ರಥಮ ಸ್ಥಾನ, ಖೋಖೋ ದ್ವಿತೀಯ, ಬಾಲ್ ಬ್ಯಾಂಡ್ಮಿಟನ್ ದ್ವಿತೀಯ ಸ್ಥಾನ ಗಳಿಸಿದೆ. ಕ್ರೀಡಾಪಟು ಪಿ.ಅರುಣ್ ವೈಯಕ್ತಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಯೋಗಶ್ರೀ ಉದ್ದ ಜಿಗಿತ ಮತ್ತು 400 ಮೀ. ಓಟದಲ್ಲಿ ಪ್ರಥಮ, ಪ್ರಾರ್ಥನಾ 600 ಮೀ. ಓಟದಲ್ಲಿ ಪ್ರಥಮ, ಆಕಾಂಕ್ಷಾ 200 ಮೀ. ಓಟದಲ್ಲಿ ದ್ವಿತೀಯ, ವರಲಕ್ಷ್ಮೀ ಗುಂಡು ಎಸೆತದಲ್ಲಿ ದ್ವಿತೀಯ, 4*100 ಮೀ. ರಿಲೆ ದ್ವಿತೀಯ, ವಾಲಿಬಾಲ್ ದ್ವಿತೀಯ, ಖೊಖೋ ದ್ವಿತೀಯ ಸ್ಥಾನ ಗಳಿಸಿದೆ. ಬಾಲಕಿಯರ ವೈಯಕ್ತಿಕ ಪ್ರಶಸ್ತಿ ಯೋಗಶ್ರೀಗೆ ಲಭಿಸಿದೆ. ಕ್ರೀಡಾಪಟುಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಎಚ.ಎಸ್.ರಮೇಶ್, ಕಾರ್ಯದರ್ಶಿ ವೀಣಾ ರಮೇಶ್, ಆಡಳಿತಾಧಿಕಾರಿ ಸಿದ್ದರಾಮೇಗೌಡ, ಶೈಕ್ಷಣಿಕ ಸಲಹೆಗಾರ ಬಸವರಾಜು, ಪ್ರಾಂಶುಪಾಲೆ ಎಸ್.ಸೌಮ್ಯಾ, ಮುಖ್ಯ ಶಿಕ್ಷಕಿ ಸಿ.ಎನ್.ಕವಿತಾ, ದೈಹಿಕ ಶಿಕ್ಷಣ ಶಿಕ್ಷಕ ಬಿ.ಯೋಗೇಶ್, ತರಬೇತುದಾರ ಹರೀಶ್ ಮತ್ತು ಅಧ್ಯಾಪಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net