

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಮಲ್ಲಯ್ಯನಗಿರಿ ರೈತ ಉತ್ಪಾದಕರ ಕಂಪನಿ ಹಾಗೂ ಈಶಾ ಔಟ್ ರೀಚ್ ಸಂಸ್ಥೆ ವತಿಯಿಂದ ಆ.10ರಂದು ಇಲ್ಲಿನ ಎಸ್‌ಎಂಎಸ್ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.
ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯರು 6+2 ಸಂಖ್ಯೆಯ ಗುಂಪು (ಟೀಂ) ರಚಿಸಿಕೊಂಡು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಪ್ರಥಮ ಬಹುಮಾನ 10,000 ರೂ., ದ್ವಿತೀಯ 7,000 ರೂ., ತೃತೀಯ 5,000 ರೂ., ಮತ್ತು ನಾಲ್ಕನೇ ಬಹುಮಾನ 3,000 ರೂ. ನೀಡಲಾಗುವುದು. ವಿಜೇತರಾದ ಎರಡು ತಂಡಗಳಿಗೆ ಡಿವಿಜನ್ ನಂತರ ಫೈನಲ್ ಪಂದ್ಯದಲ್ಲಿ 5 ಲಕ್ಷ ರೂ. ಬಹುಮಾನ ನೀಡಲಾಗುವುದು. ವಿಶ್ವವಿದ್ಯಾಲಯದ ಮಟ್ಟದ ಮಹಿಳಾ ಆಟಗಾರರಿಗೆ ಅವಕಾಶವಿಲ್ಲ. ಆಟಗಾರರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕಿದೆ ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.