ವೀರಶೈವ ಸಮಾಜದವರಿಗೆ ಕ್ರೀಡಾಕೂಟ ಆಯೋಜನೆ

sports
Published on

ಕುಶಾಲನಗರ:

ಕುಶಾಲನಗರ ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಶನಿವಾರ ಕುಶಾಲನಗರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವೀರಶೈವ ಸಮಾಜ ಬಾಂಧವರಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ಕ್ರೀಡಾಕೂಟ ಉದ್ಘಾಟಿಸಿದ ಜಿಲ್ಲಾ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ನಂದೀಶ್ ಮಾತನಾಡಿ, ಕ್ರೀಡಾಕೂಟಗಳು ಪರಸ್ಪರ ಸ್ನೇಹ, ಒಗ್ಗಟ್ಟಿಗೆ ಸಹಕಾರಿ ಹಾಗೂ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಇಂತಹ ಕ್ರೀಡಾಕೂಟಗಳು ಪೂರಕ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಬೆಳೆಸಿಕೊಂಡು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ. ಮಧುಸೂದನ್, ಕ್ರೀಡಾಕೂಟಗಳು ಪರಸ್ಪರ ಪ್ರೀತಿ- ವಿಶ್ವಾಸ, ಬಾಂಧವ್ಯ ಹಾಗೂ ಸೌಹಾರ್ದತೆ ಬೆಳೆಸಲು ಸಹಕಾರಿಯಾಗಿವೆ. ವೀರಶೈವ ಸಮಾಜದ ವತಿಯಿಂದ ಕೈಗೊಳ್ಳುವ ಸಮಾಜಮುಖಿ ಸೇವಾ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ತೊರೆನೂರು ಗ್ರಾಮದ ಟಿ.ಎಚ್. ಗಣೇಶ್ ಮಾತನಾಡಿದರು.

ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾ ಕರುಣ್, ಮಹಾಸಭಾದ ತಾಲೂಕು ಘಟಕದ ಉಪಾಧ್ಯಕ್ಷ ಎಂ.ವಿ. ಹರೀಶ್, ಪ್ರಧಾನ ಕಾರ್ಯದರ್ಶಿ ಬಿ.ಎನ್. ಶುಭಶೇಖರ್, ಕಾರ್ಯದರ್ಶಿಗಳಾದ ಕೆ.ಡಿ. ಪ್ರಶಾಂತ್, ಎನ್. ಧರ್ಮೇಂದ್ರ, ಸಂಘಟನಾ ಕಾರ್ಯದರ್ಶಿ ಬಿ.ಬಿ. ಲೋಕೇಶ್, ಖಜಾಂಚಿ ವಿ.ಸಿ. ಅಜಿತ್, ನಿರ್ದೇಶಕ ಪಾಪಣ್ಣ, ಮಹಾಸಭಾದ ಕುಶಾಲನಗರ ತಾಲೂಕು ಯುವ ಘಟಕದ ಅಧ್ಯಕ್ಷ ಎಚ್.ಪಿ. ವಿನಯ್, ಉಪಾಧ್ಯಕ್ಷ ಎಂ.ಎಸ್. ರಾಜ, ಮಹಾಸಭಾದ ಕುಶಾಲನಗರ ಟೌನ್ ಘಟಕದ ಅಧ್ಯಕ್ಷ ಎಂ.ಸಿ. ಸಚಿನ್, ಪ್ರಮುಖರಾದ ಎಂ.ಎಸ್. ಗಣೇಶ್, ಎಚ್.ಸಿ. ಬಸವರಾಜ್, ಮಹಿಳಾ ಘಟಕದ ಸದಸ್ಯರಾದ ಮನು ಜಗದೀಶ್, ವಿಜಯ ಪಾಲಾಕ್ಷ, ಸರೋಜ ಆರಾಧ್ಯ, ಎಚ್.ಎಸ್. ಉಮಾ, ಶಿಕ್ಷಕರಾದ ಎಸ್.ಪಿ.ಪರಮೇಶ್, ಎಸ್.ವಿರೂಪಾಕ್ಷ, ಎಚ್.ಸಿ.ಬಸವರಾಜ್ ಇತರರು ಇದ್ದರು.

ಗಮನ ಸೆಳೆದ ಕ್ರೀಡಾಕೂಟ:

ಕ್ರೀಡಾಕೂಟದಲ್ಲಿ ಚಿಕ್ಕ ಮಕ್ಕಳಿಂದ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಯುವಕರು- ಯುವತಿಯರು ಸೇರಿದಂತೆ ವಯೋವೃದ್ಧರಿಗೆ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳು ಗಮನ ಸೆಳೆದವು.

ಪುರುಷರಿಗೆ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ, ಮಹಿಳೆಯರಿಗೆ ಥ್ರೋಬಾಲ್ ಟೂರ್ನಿ, ಪುರುಷರು ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ನಿಧಾನ ಸೈಕಲ್ ಚಾಲನೆ, ವಿಕಲಚೇತನ ದಿವ್ಯಾಂಗ ಮಕ್ಕಳಿಗೆ ಟೆನಿಸ್ ಬಾಲ್ ಎಸೆತದ ಸ್ಪರ್ಧೆ, ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.

ಓಟದ ಸ್ಪರ್ಧೆ , ಗೋಣಿಚೀಲದ ಮೂರು ಕಾಲು ಓಟ ಹಾಗೂ ಬಾಲಕಿಯರಿಗೆ ಚಮಚದ ಮೇಲೆ ನಿಂಬೆ ಹಣ್ಣನ್ನಿಟ್ಟು ಓಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net