

ಮಡಿಕೇರಿ:
ಕೊಡವ ಭಾಷಿಕ ಸಮುದಾಯದವರ ಕ್ರೀಡೋತ್ಸವ ಮೇ 13ರಿಂದ 15ರ ವರೆಗೆ ಮೂರ್ನಾಡು ಜೂನಿಯರ್ ಕಾಲೇಜು ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರು ದಿನ ನಡೆಯುವ ಈ ಕ್ರೀಡಾಕೂಟದಲ್ಲಿ ಕ್ರಿಕೆಟ್, ಪುರುಷ ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಲಿದೆ.
ಪ್ರತಿ ಕೊಡವ ಭಾಷಿಕ ಸಮಾಜದಿಂದ ಒಂದು ತಂಡ ನೋಂದಾಯಿಸಿಕೊಳ್ಳಲು ಅವಕಾಶವಿದ್ದು ತಂಡಗಳ ನೊಂದಾವಣಿಗೆ ಮೇ 2ನೇ ತಾರೀಕು ಕೊನೆಯ ದಿನವಾಗಿದೆ. ಮೇ 13ರಂದು ಉದ್ಘಾಟನೆಯಾಘಲಿರುವ ಕ್ರೀಡೋತ್ಸವದ ಫೈನಲ್ ಪಂದ್ಯಗಳು ಮೇ 15ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, 21 ಭಾಷಿಕ ಸಮಾಜಗಳ ಅಧ್ಯಕ್ಷರು, ಅಖಿಲ ಕೊಡವ ಸಮಾಜದ ಅಧ್ಯಕ್ಷರನ್ನು ಅಹ್ವಾನಿಸಲಾಗುತ್ತಿದೆ.
ಕ್ರೀಡೆ ನಡೆಯುವ ಮೂರು ದಿನ ಭಾಷಿಕ ಸಮುದಾಯದವರ ಕೊಡಾಮೆಗೆ ಸಂಬAಧಿಸಿದ ಇತಿಹಾಸವನ್ನು ನೆನಪಿಸುವ ವಸ್ತು ಪ್ರದರ್ಶನಗಳ ವ್ಯವಸ್ಥೆ ಮಾಡಲಾಗಿದೆ. ಪುಸ್ತಕ ಮಳಿಗೆಗಳು, ಕೊಡವ ಸಾಂಪ್ರದಾಯಿಕ ತಿನಿಸುಗಳ ಸ್ಟಾಲ್‌ಗಳು ಸಹ ಇರಲಿದ್ದು, ಕೊನೆಯ ದಿನ ಸ್ಥಳೀಯ ಕೊಡವ ಸಮಾಜದೊಂದಿಗೆ ಯಾವುದಾದರೊಂದು ಪಂದ್ಯದಲ್ಲಿ ಪ್ರದರ್ಶನ ಪಂದ್ಯ ನಡೆಸುವ ಯೋಜನೆಯಿದೆ. ಜತೆಗೆ ಎಲ್ಲಾ ಭಾಷಿಕ ಸಮಾಜದಿಂದ ಒಬ್ಬ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವಿದ್ದು ಕ್ರೀಡೋತ್ಸವದ ಪ್ರಧಾನ ಸಂಚಾಲಕರಾಗಿ ಪಡಿಞರಂಡ ಪ್ರಭು ಕುಮಾರ್ ಅವರನ್ನು ಅಯ್ಕೆ ಮಾಡಲಾಗಿದೆ.
ಕ್ರೀಡೋತ್ಸವ ಹಿನ್ನೆಲೆಯಲ್ಲಿ ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ಬುಧವಾರ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಮೇಚೀರ ಸುಭಾಷ್ ನಾಣಯ್ಯ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಸಲಾಗಿದ್ದು, ಯಶಸ್ವಿ ಕ್ರೀಡಾಕೂಟಕ್ಕಾಗಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಒಕ್ಕೂಟದ ಕಾರ್ಯದರ್ಶಿ ಕೂಡಂಡ ಸಾಬಾ ಸುಬ್ರಮಣಿ, ಉಪಾಧ್ಯಕ್ಷ ಪೊನ್ನಿರ ಗಗನ್, ಪ್ರಮುಖರಾದ ತೊರೇರ ಕಾಶಿ, ಪೊಟ್ಟಂಡ ಗಣೇಶ್, ವೇದಪ್ಪಂಡ ಕಿರಣ್, ತಾಪನೆರ ಮಹೇಶ್, ಭೈರಿಕುಂದಿರ ಮನು, ಕೊಲೆಯಂಡ ಗಿರೀಶ್, ಅರಮನೆ ಪಾಲೆ ದೇವರಯ್ಯ, ಚೊಕೀರ ಜೀವನ್, ದಿನೇಶ್, ತಾರ, ರೇಘನ್, ಪಾತಂಡ ಸಂತೋಷ್, ಉದಯ, ಸಾಗರ್, ದಿನು, ಮಿಲನ್ ಮತ್ತಿತರರು ಈ ಸಭೆಯಲ್ಲಿ ಇದ್ದರು.