ಮಹಿಳೆಯರಿಗಾಗಿ ಕ್ರೀಡಾಕೂಟ ಮಾ.27 ರಂದು

sports
Published on

ಮದ್ದೂರು: ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಪಂಚಾಯತಿ ವತಿಯಿಂದ 8 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಕ್ರೀಡಾಕೂಟವನ್ನು ತಾಲೂಕು ಕ್ರೀಡಾಂಣಗಣದಲ್ಲಿ ಮಾ.27 ರಂದು ಆಯೋಜಿಸಲಾಗಿದೆ ಎಂದು ತಾಪಂ ಇಒ ರಾಮಲಿಂಗಯ್ಯ ತಿಳಿಸಿದ್ದಾರೆ. ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು. ಕ್ರಿಕೆಟ್, ಥ್ರೋಬಾಲ್, ಕಬಡ್ಡಿ, ಶಾಟ್ ಪುಟ್, ಡಿಸ್ಕಸ್ ಥ್ರೋ, 100 ಮೀ. ಓಟದ ಸ್ಪರ್ಧೆಗಳು ಜರುಗಲಿವೆ.

ಕೃಷಿ ಇಲಾಖೆ ಆವರಣದಲ್ಲಿ ರಾಗಿ ಬೀಸುವ ಸ್ಪರ್ಧೆ, ತಾಲೂಕು ಕ್ರೀಡಾಂಗಣದಲ್ಲಿ ರಂಗೋಲಿ ಹಾಗೂ ತರಕಾರಿ ಕೆತ್ತನೆ ಸ್ಪರ್ಧೆ ನಡೆಯಲಿದೆ. ಚರ್ಚಾ ಸ್ಪರ್ಧೆ ಮತ್ತು ಆಶು ಭಾಷಣ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net