ಶಿಕ್ಷಣದೊಂದಿಗೆ ಕ್ರೀಡಾಚಟುವಟಿಕೆಯೂ ಅವಶ್ಯ

sports
ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಸರ್ಕಾರಿ ಶಾಲೆ ಮಕ್ಕಳು ಭಾಗವಹಿಸಿದ್ದರು. ವಡ್ಡರಹಳ್ಳಿ ಗ್ರಾಪಂ ಸದಸ್ಯ ರಾಜಗೋಪಾಲ್, ಕಾರ್ಯಕ್ರಮ ಸಂಯೋಜಕ ಥಾಮಸ್ ಲಾರೆನ್ಸ್, ಶ್ರವಣೂರು ಗ್ರಾಮದ ನಿವೃತ್ತ ಶಿಕ್ಷಕ ಕೆಂಪಣ್ಣ ಮತ್ತು ಡೆಬೋರಾ ಫೌಂಡೇಶನ್ ಸಿಬ್ಬಂದಿ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜತೆಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮಲ್ಲಿನ ಪ್ರತಿಭೆಗಳನ್ನು ಬಲಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಡೆಬೋರ ಫೌಂಡೇಶನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟ್ ಡಾ.ಮಿತ್ರ ಅವರು ಕರೆ ನೀಡಿದರು.ದೊಡ್ಡಬಳ್ಳಾಪುರ ಟೆನಿಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕ್ರೀಡಾಕೂಟದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವ ಉದ್ದೇಶದಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ, ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದರು. ಮಕ್ಕಳನ್ನು ನೋಡುತ್ತಿದ್ದರೆ ನನ್ನ ವಿದ್ಯಾರ್ಥಿ ಜೀವನ ನೆನಪು ಬರುತ್ತದೆ, ವಿದ್ಯಾರ್ಥಿ ಜೀವನ ಚಿನ್ನದ ಜೀವನ ಎನ್ನುವುದು ಸತ್ಯ ಎಂದರು.
ವಿದ್ಯಾರ್ಥಿಗಳು ವಿದ್ಯಾರ್ಥಿದಿಸೆಯಲ್ಲಿ ಶ್ರದ್ಧೆಯಿಂದ ಶಿಕ್ಷಣ ಕಲಿಯಬೇಕು ಇದೇ ವೇಳೆ ತಮಗೆ ಆಸಕ್ತಿ ಇರುವ ಕ್ರೀಡೆಗಳ ಕಡೆಯೂ ಗಮನ ನೀಡಬೇಕು ಎಂದು ವ್ಯವಸ್ಥಾಪಕ ಟ್ರಸ್ಟಿ ಥಾಮಸ್ ರಾಜ್‌ಕುಮಾರ್ ಕಿವಿಮಾತು ಹೇಳಿದರು.
ಬಹುಮಾನ ವಿತರಣೆ:
ಕ್ರೀಡಾಕೂಟದಲ್ಲಿ ವಿಜೇತರನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು. ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು, ಶ್ರವಣೂರು, ಮೆಣಸಿಕಾಲನಿ ಹುಸ್ಕೂರು, ನೇರಳಘಟ್ಟ, ತಿರುಮಗೊಂಡನಹಳ್ಳಿ, ತಳಗವಾರ, ವಡ್ಡರಹಳ್ಳಿ, ಹೊಸಹಳ್ಳಿ ತಾಂಡ, ಕೆಳಗಿನ ನಾಯಕರಂಡಹಳ್ಳಿ, ಅಂತರಹಳ್ಳಿ, ಕೊಡಿಗೆಹಳ್ಳಿ ಹಾಗೂ ದೇವನಹಳ್ಳಿ ತಾಲೂಕಿನ ಆಲೂರು, ಬನ್ನಿಮಂಗಳ, ಬಚ್ಚಳ್ಳಿ, ಸೋಲುಕುಂಟೆ, ಸುನಗಟ್ಟ ಗ್ರಾಮಗಳ ಸರ್ಕಾರಿ ಶಾಲೆ ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net