ಸ್ಪೋಕೋ ಶಿಕ್ಷಣ ಸಂಸ್ಥೆಗೆ ನೂತನ ಸಿಇಒ ನೇಮಕ

web2
ಚಂದರಗಿಯ ಸಂಯುಕ್ತ ಕ್ರೀಡಾ ವಸತಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಕಾಶ ನರಹರಿ ಮಾತನಾಡಿದರು. ಎಸ್.ಎಂ. ಜಾಮದಾರ, ಎಸ್.ಎಂ.ಕಲೂತಿ, ಎಸ್.ಆರ್.ನವರಕ್ಕಿ ಇತರರು ಇದ್ದರು.
Published on

ಕಟಕೋಳ: ಸಮೀಪದ ಚಂದರಗಿಯ ಸಂಯುಕ್ತ ಕ್ರೀಡಾ ವಸತಿ ಮಹಾವಿದ್ಯಾಲಯಕ್ಕೆ ನೂತನ ಸಿಇಒ (ಮುಖ್ಯ ಆಡಳಿತ ಅಧಿಕಾರಿ) ಆಗಿ ಲೆಫ್ಟಿನೆಂಟ್ ಕರ್ನಲ್ ಪ್ರಕಾಶ ನರಹರಿ ಅವರು ನೇಮಕಗೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ನರಹರಿ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿ ನಿವತ್ತರಾದವರು. 25 ವರ್ಷಗಳ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗ ಚಂದರಗಿಯ ಸ್ಪೋಕೋ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ಸ್ಪರ್ಧಾ ಪದವಿ ಕಾಲೇಜು, ಪದವಿ ಪೂರ್ವ ಮಹಾವಿದ್ಯಾಲಯ, ಸಿಬಿಎಸ್‌ಇ ಪ್ರೌಢಶಾಲೆ, ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಕ್ರೀಡಾ ವಿಭಾಗದ ಮುಖ್ಯಸ್ಥರಾಗಿ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಿವತ್ತ ಐಎಎಸ್ ಅಧಿಕಾರಿ ಹಾಗೂ ಸ್ಪರ್ಧಾ ಪದವಿ ಕಾಲೇಜಿನ ಮಾರ್ಗದರ್ಶಕ ಎಸ್.ಎಂ. ಜಾಮದಾರ ಹಾಗೂ ಸಂಸ್ಥಾಪಕ ಎಸ್.ಎಂ.ಕಲೂತಿ, ನಿರ್ದೇಶಕರಾದ ಎಸ್.ಆರ್.ನವರಕ್ಕಿ, ಎಂ.ಎಸ್.ಮನೋಳಿ,
ಎಸ್.ಬಿ.ಯರಗನವಿ, ಬಿ.ಎಂ.ಬೆಳಗಲಿ, ಉದಯ ಸೋಮನಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net