ಹಾಳಾದ ರಸ್ತೆ, ತಪ್ಪದ ಅವಸ್ಥೆ

7NSG1-Web
ನೇಸರಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ರಸ್ತೆ ಹಾಳಾಗಿರುವುದು.
Published on

ನೇಸರಗಿ: ಗ್ರಾಮದ ಬಸ್ ನಿಲ್ದಾಣದ ಮುಂಭಾಗದ ರಸ್ತೆ ತಗ್ಗು-ಗುಂಡಿ ನಿರ್ಮಾಣವಾಗಿ ಹಾಳಾಗಿರುವ ಪರಿಣಾಮ ಈ ಮಾರ್ಗದ ಮೂಲಕ ಸಂಚಾರ ಮಾಡುವ ವಾಹನ ಸವಾರರು ಹಾಗೂ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ. ಈ ಮಾರ್ಗದ ಮೂಲಕ ಗೋಕಾಕ, ಅಂಕಲಗಿ, ಬೈಲಹೊಂಗಲ, ಯರಗಟ್ಟಿ, ಬೆಳಗಾವಿ ಸೇರಿ ಸುತ್ತಮುತ್ತಲ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಬಸ್‌ಗಳು ಸಂಚರಿಸುತ್ತವೆ. ಆದರೆ, ರಸ್ತೆ ಹಾಳಾದ ಕಾರಣ ಸುಗಮ ಸಂಚಾರ ಪ್ರಯಾಣಿಕರಿಗೆ ಮರೀಚಿಕೆಯಾಗಿದೆ. ಇನ್ನಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಪ್ರಯಾಣಿಕರ ಒತ್ತಾಯಿಸಿದ್ದಾರೆ.

ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದ್ದು, ವಾರದಲ್ಲಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಲಾಗುವುದು. | ಅನಿಲ ಎಂ., ಎಸ್‌ಒ, ಲೋಕೊಪಯೋಗಿ ಇಲಾಖೆ, ಬೈಲಹೊಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net