

ತುಮಕೂರು: ಕರೊನಾ ಹೆದರಿಸಲು ಎಲ್ಲರೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಲಹೆ ನೀಡಿದರು.
ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸ್ಪಿರುಲಿನ ಫೌಂಡೇಷನ್ ಹಮ್ಮಿಕೊಂಡಿದ್ದ ಮಠದ ವಿದ್ಯಾರ್ಥಿಗಳಿಗೆ ಸ್ಪಿರುಲಿನ ಚಿಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಅಪೌಷ್ಟಿಕತೆ ಸಮಸ್ಯೆ ಮಾರಕವಾಗಿದೆ, ಮಕ್ಕಳು, ಗರ್ಭಿಣಿ, ಬಾಣಂತಿ, ವೃದ್ಧರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಸ್ಪಿರುಲಿನ ಚಿಕ್ಕಿ ಪೌಷ್ಟಿಕ ಆಹಾರವಾಗಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ಸ್ಪಿರುಲಿನ ಇದೊಂದು ಪಾಚಿ ಜಾತಿಯ ಸಸ್ಯವಾಗಿದ್ದು, ಜನರಿಗೆ ಇನ್ನೂ ಚಿರಪರಿಚಿತವಾಗಿಲ್ಲ. ಸಿದ್ಧಗಂಗಾ ಮಠಕ್ಕೆ ಪ್ರತಿದಿನ ಗಣ್ಯಾತಿಗಣ್ಯರು, ವಿದೇಶಿಯರು, ಸಾರ್ವಜನಿಕರು ಭೇಟಿ ನೀಡುವುದರಿಂದ ಸ್ಪಿರುಲಿನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಠದ ಆವರಣದಲ್ಲಿಯೇ ಸ್ಪಿರುಲಿನ ಬೆಳೆಯ ಪ್ರಾತ್ಯಕ್ಷಿಕೆ ಟಕ ಸ್ಥಾಪಿಸಲು ಹಾಗೂ ಮಠದ ಮಕ್ಕಳಿಗೆ ಪ್ರತಿದಿನ ಸ್ಪಿರುಲಿನ ಚಿಕ್ಕಿ ಹಾಗೂ ವಾತ್ರೆಗಳ ಪೂರೈಕೆಗಾಗಿ ಸ್ಪಿರುಲಿನ ಬೆಳೆಯಲು ಸ್ಥಳಾವಕಾಶ ಕಲ್ಪಿಸಲಾಗುವುದು ಎಂದರು. ಮಕ್ಕಳಿಗೆ ಕೇವಲ ಸ್ಪಿರುಲಿನ ಪಾಚಿ ಸೇವನೆ ವಾಡಲು ನೀಡಿದರೆ ಅವರು ತಿನ್ನುವುದಿಲ್ಲ. ಹಾಗಾಗಿ, ಬೆಲ್ಲ ಮತ್ತು ಕಡಲೆಬೀಜ ಬಳಸಿ ಚಿಕ್ಕಿ ತಯಾರಿಸಿ ನೀಡಲಾಗುತ್ತಿದೆ. ಬೆಲ್ಲದ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಳವಾಗಿ ಮಕ್ಕಳ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಹೇಳಿದರು.
ಸ್ಪಿರುಲಿನ ಚಿಕ್ಕಿ ಆಹಾರವೂ ಹೌದು, ಔಷಧವೂ ಹೌದು. ದೇಹದಲ್ಲಿರುವ ಕೊರತೆ ಸರಿದೂಗಿಸುವ ಶಕ್ತಿ ಅದಕ್ಕಿದೆ. ಮಕ್ಕಳಷ್ಟೇ ಅಲ್ಲದೆ ಯುವಕರು, ಮಹಿಳೆಯರು, ವೃದ್ಧರು ಚಿಕ್ಕಿ ಸೇವಿಸುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ವಾತನಾಡಿ, ನೈಸರ್ಗಿಕವಾದ ಪೌಷ್ಟಿಕ ಆಹಾರವಾಗಿರುವ ಸ್ಪಿರುಲಿನ 100ಕ್ಕೂ ಹೆಚ್ಚು ಪೋಷಕಾಂಶ ಒಳಗೊಂಡಿದೆ. ಹೇರಳ ಪ್ರವಾಣದಲ್ಲಿ ಸೂಕ್ಷ್ಮ ಪೋಷಕಾಂಶ ಹೊಂದಿದೆ ಎಂದು ಮೈಸೂರಿನ ಸಿಎಫ್‌ಟಿಆರ್‌ಐ (ಕೇಂದ್ರೀಯ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಕೇಂದ್ರ) ಸಂಶೋಧನೆಯಲ್ಲಿ ದೃಢಪಟ್ಟಿದೆ ಎಂದು ಹೇಳಿದರು.
ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಇದೇ ತಿಂಗಳ 2ನೇ ವಾರದಿಂದ ಒಡಿಶಾದ ಸುಂದರಡ ಜಿಲ್ಲೆಯ ಸುಮಾರು 30 ಸಾವಿರ ಮಕ್ಕಳಿಗೆ ಸ್ಪಿರುಲಿನ ಪೂರಕ ಆಹಾರ ಒದಗಿಸಲು ಸ್ಪಿರುಲಿನ ಫೌಂಡೇಷನ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದು ತಿಳಿಸಿದರು.
ಸ್ಪಿರುಲಿನ ಫೌಂಡೇಷನ್ ಮುಖ್ಯಸ್ಥ ಸಿ.ಎಸ್.ಕೇದಾರ್ ಅವರು ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕಷ್ಟೇ ಅಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಸ್ಪಿರುಲಿನ ಚಿಕ್ಕಿ ವಿತರಿಸುವ ಉದ್ದೇಶ ಹೊಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ಈ ಸ್ಪಿರುಲಿನ ಚಿಕ್ಕಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸ್ಪಿರುಲಿನ ಫೌಂಡೇಷನ್ ಅಧ್ಯಕ್ಷ ಆರ್.ವಿ.ಮಹೇಶ್ ಮಾತನಾಡಿದರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಸಿದ್ಧಗಂಗಾ ಆಸ್ಪತ್ರೆ ಮುಖ್ಯಸ್ಥ ಡಾ.ಪರಮೇಶ್ ಇದ್ದರು.
ಸ್ಪಿರುಲಿನ ಚಿಕ್ಕಿಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಲ್ಲದೆ ಮಕ್ಕಳು ತಿನ್ನುವ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿ ರಕ್ತಕ್ಕೆ ಪೂರೈಸುವ ಕೆಲಸ ವಾಡುತ್ತದೆ. ನಿಯಮಿತವಾಗಿ ಪ್ರತಿದಿನ ಸ್ಪಿರುಲಿನ ಸೇವನೆಯಿಂದ ಮಕ್ಕಳಲ್ಲಿ ಸಾವಾನ್ಯವಾಗಿ ಕಂಡು ಬರುವ ವಾಂತಿ, ಭೇದಿ, ಕೆಮ್ಮು, ನೆಗಡಿಯಂತಹ ಕಾಯಿಲೆಗಳನ್ನು ದೂರವಿಡಬಹುದು. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ ಸ್ವಸಹಾಯ ಗುಂಪಿನ ಮಹಿಳೆಯರ ಮೂಲಕ ಸ್ಪಿರುಲಿನ ಚಿಕ್ಕಿ ಉತ್ಪಾದಿಸುವ ಉದ್ದೇಶವಿದ್ದು, ಇದರಿಂದ ಸ್ಥಳೀಯ ಮಹಿಳೆಯರ ಆರ್ಥಿಕ ಬಲ ಹೆಚ್ಚಾಗುವುದಲ್ಲದೆ ಮಕ್ಕಳ ಆರೋಗ್ಯವೂ ವೃದ್ಧಿಯಾಗುತ್ತದೆ. ಸಿ.ಎಸ್.ಕೇದಾರ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ