ಅಧ್ಯಾತ್ಮ ಚಿಂತನೆಯಿಂದ ಬದಲಾವಣೆ ಸಾಧ್ಯ: ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ಆರ್ಶೀವಚನ

bajane
ಬಳ್ಳಾರಿಯ ಶ್ರೀವ್ಯಾಸರಾಜ ಮಠದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಜನಾ ಕಮ್ಮಟ-ದಾಸ ಚಿಂತನೆ ಕಾರ್ಯಕ್ರಮದಲ್ಲಿ ಶ್ರೀಅಕ್ಷೋಭ್ಯ ರಾಮಪ್ರಿಯ ತೀರ್ಥರು ಮಾತನಾಡಿದರು.
Published on

ಬಳ್ಳಾರಿ: ಅಧ್ಯಾತ್ಮ ಚಿಂತನೆ, ಭಗವಂತನ ಭಜನೆ ಮಾಡುವುದರಿಂದ ಮನುಷ್ಯನಲ್ಲಿ ಹಲವು ಬದಲಾವಣೆಯಾಗಿ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದು ಬಾಳಗಾರು ಶ್ರೀಮದಾರ್ಯ ಅಕ್ಷೋಭ್ಯ ತೀರ್ಥ ಸಂಸ್ಥಾನದ ಕಿರಿಯ ಯತಿ ಶ್ರೀಅಕ್ಷೋಭ್ಯ ರಾಮಪ್ರಿಯ ತೀರ್ಥರು ಹೇಳಿದರು.

ಮಾನಸಿಕ ಹಾಗೂ ದೈಹಿಕ ಬದಲಾವಣೆ

ಏಕಾದಶಿ ನಿಮಿತ್ತ ನಗರದ ಶ್ರೀವ್ಯಾಸರಾಜ ಮಠದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಜನಾ ಕಮ್ಮಟ ದಾಸ ಚಿಂತನೆ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿದರು. ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳು ಆಗುತ್ತವೆ. ಪ್ರಸ್ತುತ ಆಧುನಿಕ ಭರಾಟೆಯಿಂದಾಗಿ ಸನಾತನ ಧರ್ಮದ ಆಚಾರ, ವಿಚಾರಗಳಿಂದ ಯುವ ಸಮೂಹ ದೂರವಿದೆ. ಪಾಲಕರು ಮಕ್ಕಳಿಗೆ ಬಾಲ್ಯದಲ್ಲೇ ಹರಿದಾಸ, ಮಹನೀಯರನ್ನು ಅನುಸರಿಸಲು ಪ್ರೇರೇಪಿಸಬೇಕು ಎಂದರು.

ವಿದ್ಯಾಪೀಠದ ಪಂಡಿತ ಟಿ.ಎಚ್.ಬದ್ರಿನಾಥ ಆಚಾರ್ಯ ಉಪನ್ಯಾಸ ನೀಡಿದರು. ಭಜನಾ ಕಾರ್ಯಕ್ರಮದಲ್ಲಿ ಶ್ರೀವಿನಾಯಕ ಮಹಿಳಾ ಮಂಡಳಿ, ಶ್ರೀಲಕ್ಷ್ಮೀ ನರಸಿಂಹ ಮಂಡಳಿ, ಶ್ರೀನಿವಾಸ ಭಜನಾ ತಂಡ, ಶ್ರೀವ್ಯಾಸರಾಜ ಭಜನಾ ಮಂಡಳಿಯ ವಿವಿಧ ತಂಡಗಳ ಸದಸ್ಯರು ಭಾಗವಹಿಸಿದ್ದರು. ಶ್ರೀಮಠದ ವ್ಯವಸ್ಥಾಪಕ ಅಶೋಕ್ ಕುಲಕರ್ಣಿ, ಮಂತ್ರಾಲಯ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ, ಸ್ಥಳೀಯರಾದ ಅನಂತ್ ಆಚಾರ್ಯ, ಜಯಸಿಂಹ, ಹೊಸಪೇಟೆ ಪವನಾಚಾರ್ಯ, ನಾಗಭೂಷಣ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net