ವ್ಯಕ್ತಿ ತನ್ನನ್ನು ತಾನು ಅರಿಯುವುದೇ ಆಧ್ಯಾತ್ಮ

CTD MALLADIHALLI----
Published on

ಚಿತ್ರದುರ್ಗ: ವ್ಯಕ್ತಿ ತನ್ನನ್ನು ತಾನು ಅರಿಯುವುದೇ ಆಧ್ಯಾತ್ಮ. ಅದು ಮೌಢ್ಯವಲ್ಲ ಎಂದು ವ್ಯಂಗ್ಯಚಿತ್ರಕಾರ ಡಾ.ಎಚ್.ಬಿ. ಮಂಜುನಾಥ್ ಹೇಳಿದರು.

ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಸಂಸ್ಥಾಪಕರಾದ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಶ್ರೀ ಸೂರುದಾಸ್‌ಜೀ ಸ್ವಾಮೀಜಿ ಅವರ ಪುಣ್ಯಾರಾಧನೆ ಅಂಗವಾಗಿ ಶನಿವಾರ ಆಯೋಜಿಸಿದ್ದ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಇಂದು ಆರ್ಥಿಕವಾಗಿ ಸಬಲವಾಗುವ ನಿಟ್ಟಿನಲ್ಲಿ ಆಧ್ಯಾತ್ಮ ಮರೆಯುತ್ತಿದೆ. ಆಧ್ಯಾತ್ಮ ವ್ಯಕ್ತಿಯ ಅಂತರಂಗವನ್ನು ಜಾಗೃತಿಗೊಳಿಸುತ್ತದೆ. ಮಲ್ಲಾಡಿಹಳ್ಳಿ ಸ್ವಾಮೀಜಿದ್ವಯರು ವಿದ್ಯೆ ಜತೆಗೆ ವಿದ್ಯಾರ್ಥಿಗಳ ಅಂತರಂಗ ಸಾಧನೆಗೆ ಭಜನೆ, ಯೋಗ, ಆಯುರ್ವೇದ, ಕೃಷಿ ಮತ್ತು ಸಂಗೀತ ಕಲಿಸಲು ಒತ್ತು ನೀಡಿದ್ದರು. ಈ ಭಾಗದ ಜನರ ಬದುಕು ಕಟ್ಟಿಕೊಡಲು ಶ್ರಮಿಸಿದ್ದರು ಎಂದರು.

ಚಲನಚಿತ್ರ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ, ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಮ್ಮೆಲ್ಲರ ಕರ್ತ ವ್ಯವಾಗಬೇಕು ಎಂದರು.

ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ರಚಿಸಿದ ‘ತಿರುಕಯಾನ’ ದ ಅನುವಾದಿತ‘ಜರ್ನಿ ಆಫ್ ಯೋಗ ಮಾ ಸ್ಟರ್’ ಕೃತಿ ಬಿಡುಗಡೆ ಮಾಡಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಎಂ.ಎಚ್. ರುದ್ರಮುನಿ ಕೃತಿ ಕುರಿತು ಮಾತನಾಡಿದರು.

ಸೇವಾಶ್ರಮದ ಕಾರ್ಯದರ್ಶಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ವಿಶ್ವಸ್ಥರಾದ ಕೆ.ಡಿ. ಬಡಿಗೇರ, ಎಲ್.ಎಸ್. ಶಿವರಾಮಯ್ಯ, ಎಂ.ಜಿ. ರಾಮದಾಸ್, ಶ್ರೀನಿವಾಸ್, ಪಿ.ಕೆ. ರಾಜಪ್ಪ, ಸುಧಾಕರ್, ಪತ್ರಕರ್ತ ಉಜ್ಜಿನಪ್ಪ, ಆಡಳಿತಾಧಿಕಾರಿ ಜಿ. ಪಾಂಡುರಂಗಮೂರ್ತಿ, ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net