ಮೈಸೂರು: ಉಪಾಸನಾ ಸಂಸ್ಥೆಯಿಂದ ಫೆ.16ರಂದು ಬಂಬೂ ಬಜಾರ್ ಬಳಿಯ ಹೋಟೆಲ್ ರಿಯೋ ಮೆರಿಡಿಯನ್‌ನಲ್ಲಿ ಸದ್ಗುರು ಶ್ರೀರಾಮ ಅವರಿಂದ ಆಧ್ಯಾತ್ಮಿಕ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಉಪಾಸಕ ಅಜಿತ್ ತಿಳಿಸಿದರು.
ಅಂದು ಬೆಳಗ್ಗೆ 9.30ರಿಂದ ಸಂಜೆ 4 ಗಂಟೆವರೆಗೆ ಸ್ವಸ್ಥ ವ್ಯಕ್ತಿ, ಸ್ವಸ್ಥ ಕುಟುಂಬ, ಸ್ವಸ್ಥ ಸಮಾಜ ವಿಷಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಿದ್ದು, ಸದ್ಗುರು ಅವರ ನೇರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಾಲ್ಗೊಳ್ಳುವವರಿಗೆ ಕ್ರಿಯಾ ಯೋಗ, ಮನೋಶಕ್ತಿ, ಸಂಹವನ ತಂತ್ರ, ಶಕ್ತಿ ಕ್ರಿಯೆ ಮೊದಲಾದವುಗಳ ಅರಿವು ಮೂಡಿಸಲಾಗುವುದು. ವಿಪರೀತ ಸಿಟ್ಟು ಶಮನ ಸೇರಿದಂತೆ ನಾನಾ ಗುಣಗಳನ್ನು ಹೋಗಲಾಡಿಸಲು ಇದು ನೆರವಾಗಲಿದೆ. ಸ್ವಾಮೀಜಿ ಸಂಪರ್ಕಕ್ಕೆ ಬಂದ ನಂತರ ನನಗೂ ಒಳ್ಳೆಯ ಅನುಭವಗಳಾಗುತ್ತಿವೆ ಎಂದು ತಿಳಿಸಿದರು. ಸಂಘಟಕರಾದ ಯಶವಂತ್, ಚೇತನ, ಕಾವ್ಯಶ್ರೀ, ನವೀನ್, ಸಂಗೀತಾ ಇದ್ದರು.