ಕಣ್ಮರೆಯಾಗುತ್ತಿದೆ ನಮ್ಮ ಸಂಸ್ಕೃತಿ- ಪರಂಪರೆ

Hrr26Mla1
Published on

ಹರಿಹರ: ಮಕ್ಕಳಿಗೆ ಲೌಕಿಕ ವ್ಯವಹಾರಕ್ಕಿಂತ ಭೌತಿಕ ಧರ್ವಚರಣೆಯನ್ನು ಕಲಿಸುವ ಅವಶ್ಯಕತೆಯಿದೆ ಎಂದು ಅಧ್ಯಾತ್ಮಿಕ ಚಿಂತಕಿ ಹಾಗೂ ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ ತಿಳಿಸಿದರು.

ನಗರದ ವಿಠ್ಠಲ ಮಂದಿರದಲ್ಲಿ ಭಾನುವಾರ ಸನಾತನ ಸಿಂಧೂ ಬಳಗದಿಂದ ಹಮ್ಮಿಕೊಂಡಿದ್ದ ನಿತ್ಯ ಸ್ತೋತ್ರಗಳು ಕಿರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸವುಳ್ಳ ನಮ್ಮ ಸಂಸ್ಕೃತಿ, ಪರಂಪರೆ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವುದು ಆತಂಕದ ವಿಷಯ. ಪ್ರಸ್ತುತ ಯುವಕರು ಆಕರ್ಷಣೆಗೊಳಗಾಗಿ ಹಾಗೂ ದುಡಿಮೆಯ ಹಿಂದೆ ಬಿದ್ದು ನಮ್ಮತನವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ತಾಯಂದಿರು ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚರಣೆ ಹಾಗೂ ಪರಂಪರೆ ಬಗ್ಗೆ ಹೇಳಿ ಕೊಡಬೇಕು. ಬಿಡುಗಡೆಯಾದ ಕೃತಿಯಲ್ಲಿರುವ ಸ್ತೋತ್ರಗಳನ್ನು ನಿತ್ಯ ಮನೆಯಲ್ಲಿ ಮಕ್ಕಳಿಂದ ಪಠಣ ಮಾಡಿಸಬೇಕು. ಇಂದು ಬಿತ್ತಿದ ಜೀಜ ಮುಂದೊಂದು ದಿನ ಮರವಾಗಿ ಎಲ್ಲರಿಗೂ ನೆರಳನ್ನು ನೀಡುತ್ತದೆ ಎಂದು ಹೇಳಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಜೀವನ ಸಾಗಿಸುವ ನಡುವೆ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಸನಾತನ ಸಿಂಧೂ ಬಳಗ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾಡುತ್ತಿರುವ ಪ್ರಯತ್ನ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ದೇಶಾಭಿಮಾನ ಮೂಡಿಸುವಂಥ ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಈ ಬಳಗ ಆಯೋಜಿಸುವಂತಾಗಲಿ ಎಂದು ಹಾರೈಸಿದರು.

ಚಿದಂಬರ ಶಾಸ್ತ್ರಿ ಮಾತನಾಡಿ, ಮನುಷ್ಯ ಬೆಳೆದಂತೆ ಅವನ ಮನಸ್ಸು ಸಂಕುಚಿತವಾಗುತ್ತದೆ. ಆದರೆ ಜಗತ್ತನ್ನು ಸಂಕುಚಿತ ಮನೋಭಾವನೆಯಿಂದ ನೋಡಬಾರದು. ನಾವು ಎನ್ನುವುದಕ್ಕಿರುವ ತಾಕತ್ತು ನಾನು ಎನ್ನುವುದಕ್ಕಿಲ್ಲ, ಇದನ್ನೇ ನಮ್ಮ ಸನಾತನ ಧರ್ಮ ಹೇಳಿಕೊಟ್ಟಿರುವುದು, ಇದುವೇ ನಮ್ಮ ಜೀವನ ಶೈಲಿಯಾಗಬೇಕು. ಆಗ ಮಾತ್ರ ನಾವು ಉಳಿಯಲು ಸಾಧ್ಯ ಎಂದು ಹೇಳಿದರು.

ಸಂಸ್ಕೃತಿ ಹಾಗೂ ಸಂಸ್ಕಾರ ಸೇರಿ ಸುಸಂಸ್ಕೃತ ವಾತಾವರಣ ನಿರ್ವಣವಾಗುತ್ತದೆ. ಆದರೆ ನಾವು ಇವೆರಡನ್ನು ಬಿಟ್ಟು ಜೀವನ ಮಾಡುತ್ತಿದ್ದೇವೆ. ಇದನ್ನರಿತ ನಮ್ಮ ಸನಾತನ ಸಿಂಧೂ ಬಳಗ ನಿತ್ಯ ಸ್ತೋತ್ರ ಎನ್ನುವ ಕಿರು ಪುಸ್ತಕ ಬಿಡುಗಡೆ ಮಾಡಿ ಒಂದು ಸಣ್ಣ ಪ್ರಯತ್ನ ಮಾಡಿದ್ದು ಭವಿಷ್ಯದಲ್ಲಿ ದೊಡ್ಡ ವ್ಯತ್ಯಾಸ ಮೂಡಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

ಉದ್ಯಮಿ ಎಂ.ಆರ್. ಸತ್ಯನಾರಾಯಣ ರಾವ್, ರಾಧಾಕೃಷ್ಣ ಗುಪ್ತ, ಸನಾತನ ಸಿಂಧೂ ಬಳಗದ ಡಾ.ಆರ್.ಆರ್. ಖಮಿತ್ಕರ್, ಎಚ್.ಪಿ. ಬಾಬಣ್ಣ, ಡಾ. ಶಶಿಕುಮಾರ್ ಮೆಹರ್ವಾಡೆ, ವೀರಣ್ಣ ಯಾದವಾಡ್, ಜಿ.ಕೆ. ಮಲ್ಲಿಕಾರ್ಜುನ್, ಶ್ರೀಧರ್​ವುೂರ್ತಿ, ಆರ್.ಎನ್. ರಘು, ಡಿ.ಜಿ. ಶಿವಾನಂದಪ್ಪ, ಪರಶುರಾಮ ಬದಿ, ಅಮಿತ್ ಕೇಳ್ಕರ್, ಜಯದೇವ್, ಸುಮಂತ್ ಖಮಿತ್ಕರ್, ಜಯಶ್ರೀ ಶ್ರೀಧರ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net