ಸಂಸ್ಕೃತಿ ಉಳಿವಿಗೆ ಆಧ್ಯಾತ್ಮಿಕ ಸತ್ಸಂಗ ಅಗತ್ಯ

Spiritual Satsang is necessary for survival of culture
ಮಹಾಲಿಂಗಪುರ ಸಮೀಪದ ಬಿಸನಾಳ ಗ್ರಾಮದ ಜೈ ಆಂಜನೇಯ ಹನುಮ ಜಯಂತಿ ನಿಮಿತ್ತ ಮತ್ತೈದೆಯರಿಂದ ತೊಟ್ಟಿಲೋತ್ಸವ ಹಾಗೂ ನಾಮಕರಣ ಕಾರ್ಯಕ್ರಮ ನಡೆಯಿತು.
Published on

ಮಹಾಲಿಂಗಪುರ: ಭಾರತೀಯ ಸಂಸ್ಕೃತಿ ಉಳಿಯಲು, ಸಂಸ್ಕಾರ ಬೆಳೆಯಲು ಸತ್ಸಂಗ ಮತ್ತು ಆಧ್ಯಾತ್ಮಿಕ ಉತ್ಸವಗಳು ಅಗತ್ಯ ಎಂದು ಗದ್ಯಾಳ ಬಬಲಾದಿಮಠದ ರಾಮಯ್ಯ ಸ್ವಾಮಿಗಳು ಹೇಳಿದರು.

ಸಮೀಪದ ಬಿಸನಾಳ ಗ್ರಾಮದ ಜೈ ಆಂಜನೇಯ ಸನ್ನಿಧಿಯಲ್ಲಿ ಇತ್ತೀಚೆಗೆ ನಡೆದ ಹನುಮ ಜಯಂತಿ ಹಾಗೂ ಬನ್ನೆಮ್ಮದೇವಿ ಜಾತ್ರೆ ಮಹೋತ್ಸವದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಎಷ್ಟೇ ಬೆಳೆದರೂ ನೆಮ್ಮದಿ ಬದುಕಿಗೆ ಆತ್ಮಜ್ಞಾನ ಬೇಕು ಎಂದರು. ಇಟ್ನಾಳದ ಸಿದ್ಧೇಶ್ವರ ಸ್ವಾಮಿಗಳು ಮಾತನಾಡಿದರು.

ಉತ್ಸವ ನಿಮಿತ್ತ ಸನ್ನಿಧಿಗೆ ಗೋಮಾತೆಯ ಪ್ರವೇಶ ಮಾಡಿಸಿ ಪೂಜಿಸಲಾಯಿತು. ಯಡೂರಿನ ಮಹಾಲಿಂಗ ಗುರುಸ್ವಾಮಿಗಳಿಂದ ಪವಮಾನ ಹೋಮ-ಹವನ ನಡೆಯಿತು. ಬನ್ನೆಮ್ಮದೇವಿ ದೇವಸ್ಥಾನದಿಂದ ಸಮೀರವಾಡಿ ಮಾರ್ಗವಾಗಿ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಪಲ್ಲಕ್ಕಿ ಉತ್ಸವ ವಾದ್ಯ ಮೇಳದೊಂದಿಗೆ ಸನ್ನಿಧಿವರೆಗೆ ಶೋಭಾಯಾತ್ರೆ ನಡೆಯಿತು. ಅಯ್ಯಪ್ಪ ಸನ್ನಿಧಿಯ ಈರಯ್ಯಸ್ವಾಮಿ, ಪ್ರಕಾಶ ಮಠದ ರುದ್ರಾಭಿಷೇಕ ನೆರವೇರಿಸಿದರು. ಮುತ್ತೈದೆಯರಿಂದ ತೊಟ್ಟಿಲೋತ್ಸವ, ನಾಮಕರಣ ಕಾರ್ಯಕ್ರಮ ನಡೆಯಿತು.

ಸಂಜೆ ಸದಾಶಿವ ರಗಟಿ ಪೂಜ್ಯರಿಂದ ಅಗ್ನಿ ಪೂಜೆ ನಂತರ ಜೈ ಆಂಜನೇಯ ಸನ್ನಿಧಿಯ ಹನುಮ ಮಾಲಾಧಾರಿಗಳಿಂದ ಹಾಗೂ ಮಹಿಳೆಯರಿಂದ ಅಗ್ನಿ ಹಾಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಬಳಿಕ ಹಾಲುಗ್ಗಿ ಅನ್ನಸಾರು ಮಹಾಪ್ರಸಾದ ಸವಿದರು.

ಶಿವಲಿಂಗ ಗುರುಸ್ವಾಮಿ, ಅಚನೂರ ಶ್ರೀಶೈಲ ಸಾಹುಕಾರ ಸ್ವಾಮೀಜಿ, ರಾಯಪ್ಪ ಕುರನಿಂಗ, ಕಲ್ಲಪ್ಪ ಮಲಕಾಪುರ, ಚಂದ್ರು ಸಂಶಿ, ಬಸಪ್ಪ ವಾಲಿ, ಸಂತೋಷ ಮುಳ್ಳೂರ, ಗಿರೀಶ ವಾಲಿ, ನಿಂಗಪ್ಪ ಕುರನಿಂಗ, ಬಸವರಾಜ ಮಾನೋಜಿ, ಯಮನಪ್ಪ ದಡ್ಡಿಮನಿ, ಅಶೋಕ ಸಂಶಿ, ಲಕ್ಕಪ್ಪ ದಳವಾಯಿ ಹಾಗೂ ಸಮೀರವಾಡಿ ಸೋಮೈಯಾ ಸಕ್ಕರೆ ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net