

ಸಿರಿಗೇರಿ: ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಹಿಮಾಲಯ ಧ್ಯಾನ ಶಿವಯೋಗಭ್ಯಾಸ ಮತ್ತು ಆಧ್ಯಾತ್ಮಿಕ ಪ್ರವಚನದ ಸಮಾರೋಪ ಸೋಮವಾರ ನಡೆಯಿತು.
ಯೋಗಿ ನಿರಂಜನ ದೇವರು ಮಾತನಾಡಿ, ಎಲ್ಲರೂ ಸಮಯಕ್ಕೆ ಮಹತ್ವ ಕೊಡಬೇಕು. ಆಲಸ್ಯಕ್ಕೆ ಒಳಗಾಗದೇ ಪುರಾಣ, ಪ್ರವಚನಗಳಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಕೋಪ, ಅಸೂಯೆ, ಅಶಾಂತಿ ಸೃಷ್ಟಿಯಿಂದ ಯಾವುದೇ ಪ್ರಯೋಜನ ಆಗದು ಎಂದರು.
ಇದನ್ನೂ ಓದಿಪುರಾಣ, ಪ್ರವಚನ ಆಲಿಕೆಯಿಂದ ಅಂತರಂಗ ಶುದ್ಧ
ಉಪನ್ಯಾಸಕ ಶಿವಕುಮಾರ್ ಬಳಿಗಾರ್ ಮಾತನಾಡಿ, ನಮ್ಮಗಳ ಚಿಂತನೆಗಳು ಸಕಾರಾತ್ಮವಾಗಿದ್ದರೆ ನೂರಾರು ಸಮಸ್ಯೆಗಳನ್ನು ಎದುರಿಸಬಹುದು ಎಂದರು.
ಬೆಳಗಿನ ಸಮಯದಲ್ಲಿ ಸಮೂಹಿಕ ಇಷ್ಟಾಲಿಂಗಧಾರಣೆ ನೀಡಲಾಯಿತು. ಲಿಂಗ, ರುದ್ರಾಕ್ಷಿ, ವಿಭೂತಿ, ವಸ್ತ್ರವನ್ನು ಸೇರಿ 100 ಕ್ಕೂ ಹೆಚ್ಚೂ ಭಕ್ತರು ಇಷ್ಟಲಿಂಗಧಾರಣೆ ಸ್ವೀಕರಿಸಿದರು. ಈ ಸಮಯದಲ್ಲಿ 400 ಮೀಟರ್ ಓಟದಲ್ಲಿ ರಾಷ್ಟಮಟ್ಟಕ್ಕೆ ಆಯ್ಕೆಯಾದ ದರ್ಶನ್, ಗುರುಶಿಷ್ಯರ ಚಿತ್ರದಲ್ಲಿ ನಟಿಸಿದ ರಂಗಭೂಮಿ ಕಲಾವಿದ ರುದ್ರಗೌಡ, ಪ್ಯಾರಾ ಒಲಂಪಿಕ್ ಗೋಲ್ಡ್ ಮೆಡಲಿಸ್ಟ್ ಎಚ್.ಎಂ.ಗಾಯತ್ರಿಗೆ ಸನ್ಮಾನಿಸಲಾಯಿತು. ಉಪನ್ಯಾಸಕರು ಶಿವುಕುಮಾರ್ ಬಳಿಗಾರ್, ಅಕ್ಕನ ಬಳಗದ ಸದಸ್ಯರಾದ ಪುಷ್ಪ ನಾಗನಗೌಡ, ಸುಮಂಗಳ ಬಳಿಗಾರ್, ಶಿಕ್ಷಕ ಎನ್.ಪಂಪಾಪತಿ ಇತರರಿದ್ದರು.