ಆಧ್ಯಾತ್ಮಿಕ ಚಿಂತನೆಗೆ ಸಾಹಿತ್ಯ ದಾರಿದೀಪ

Dvd Kasapa
ದೇವದುರ್ಗದಲ್ಲಿ ಕಸಾಪ ತಾಲೂಕು ಘಟಕದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ದತ್ತಿದಾನಿ ಆದಿ ಕಮಲಮ್ಮ, ಸಂಗೀತ ಶಿಕ್ಷಕ ಪಂಪಣ್ಣ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಭಾರತಿ ಕೋಡಿಮಠ, ಕೋರಿ ಗಂಗಮ್ಮ, ಗಿರಿಜಮ್ಮ ಇತರರಿದ್ದರು.
Published on

ದೇವದುರ್ಗ: ಜನಪದ ಹಾಗೂ ದಾಸ ಸಾಹಿತ್ಯ ಭಾರತೀಯ ಸಂಸ್ಕೃತಿಯ ಜೀವಾಳವಾಗಿದ್ದು, ಯುವಜನತೆ ಅಧ್ಯಯನ ಮಾಡಬೇಕು ಎಂದು ಉಪನ್ಯಾಸಕ ಡಾ.ಪ್ರಕಾಶ ಬುದ್ದಿನ್ನಿ ಹೇಳಿದರು.

ಪಟ್ಟಣದ ಜ್ಞಾನಜ್ಯೋತಿ ಪಪೂ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ಕಸಾಪ ನಡೆ ವಿದ್ಯಾರ್ಥಿಗಳ ಕಡೆ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಕುರಿತು ಶನಿವಾರ ಉಪನ್ಯಾಸ ನೀಡಿದರು.

ದಾಸರು ಕೀರ್ತನೆ, ಭಜನೆಗಳ ಮೂಲಕ ಸಮಾಜದ ಅಸಮಾನತೆ, ಜಾತಿ ಪದ್ಧತಿ, ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸಾಹಿತ್ಯ ಆಧ್ಯಾತ್ಮಿಕ ಚಿಂತನೆಗೆ ದಾರಿದೀಪವಾಗಿದೆ. ದಾಸ ಸಾಹಿತ್ಯಕ್ಕೆ ಜೋಳದಡಿಗೆಯ ರಾಮದಾಸರು, ಮಸರಕಲ್‌ನ ಗೋಪಾಲ ದಾಸರು, ಕೊಪ್ಪರದ ನರಹರಿ ದಾಸರು ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಜನಪದ ಸಾಹಿತ್ಯ ಬಗ್ಗೆ ಕಸಾಪ ತಾಲೂಕು ಕಾರ್ಯದರ್ಶಿ ಶಿವರಾಜ್ ರುದ್ರಾಕ್ಷಿ ಮಾತನಾಡಿ, ಜನಪದ ಸಾಹಿತ್ಯ ನಮ್ಮ ಸಂಸ್ಕೃತಿಯ ಬಳುವಳಿ. ತಾಲೂಕಿನಲ್ಲಿ ಶರಣಮ್ಮ ರಾಮಣ್ಣ ರುದ್ರಾಕ್ಷಿ, ಕಾಳಮ್ಮ ಛಲವಾದಿ, ದಾಸರ ಹಳ್ಳಪ್ಪ ಮಾಸ್ಟರ್, ಕುಂಬಾರ ಸಿದ್ದಮ್ಮ ಜನಪದ ಸಾಹಿತ್ಯದ ಪ್ರಸಿದ್ಧ ವ್ಯಕ್ತಿಗಳು ಎಂದರು. ದತ್ತಿದಾನಿ ಆದಿ ಕಮಲಮ್ಮ, ಸಂಗೀತ ಶಿಕ್ಷಕ ಪಂಪಣ್ಣ, ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಗುರುಲಿಂಗಯ್ಯ ಕೋಡಿಮಠ, ಬಿ.ಲಕ್ಷ್ಮಣ್, ರಮೇಶ್ ಮಸರಕಲ್, ಪಂಪಣ್ಣ ರಾಥೋಡ್, ಮಲ್ಲಿಕಾರ್ಜುನ್ ಬಳೆ, ಭಾರತಿ ಕೋಡಿಮಠ, ಕೋರಿ ಗಂಗಮ್ಮ, ಗಿರಿಜಮ್ಮ ಶಿಖರಮಠ್, ಶ್ರೀನಾಥ್ ರಾಯಚೂರುಕರ್, ಬಸವರಾಜ್ ಕೊಪ್ಪರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net