ಆಧ್ಯಾತ್ಮ ಪ್ರವಚನದ ಪರಿಕರ ಬಿಡುಗಡೆ

rbk 29-2 parikar
ಬನಹಟ್ಟಿಯ ಹಿರೇಮಠದಲ್ಲಿ ನಡೆಯಲಿರುವ ಆಧ್ಯಾತ್ಮಿಕ ಪ್ರವಚನದ ಪರಿಕರಗಳನ್ನು ಬನಹಟ್ಟಿ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯರು ಬಿಡುಗಡೆಗೊಳಿಸಿದರು. ಚನ್ನವೀರಪ್ಪ ಹಾದಿಮನಿ, ದಾನಪ್ಪ ಹುಲಜತ್ತಿ, ಶೇಖರ ಮಾಲಾಪುರ ಇದ್ದರು.
Published on

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ಹಿರೇಮಠದಲ್ಲಿ ಡಿ.11 ರಿಂದ 17ರ ವರೆಗೆ ನಡೆಯುವ ಶಾಂತವೀರ ಶಿವಾಚಾರ್ಯರ 34ನೇ ಚಿರಲಿಂಗಾಂಗ ಸಾಮರಸ್ಯ ಆಧ್ಯಾತ್ಮ ಪ್ರವಚನ ಹಾಗೂ ಅಯ್ಯಚಾರ, ಸಾಮೂಹಿಕ ಲಿಂಗದೀಕ್ಷೆ ಕಾರ್ಯಕ್ರಮದ ಪರಿಕರಗಳನ್ನು ಶ್ರೀಮಠದ ಶರಣಬಸವ ಶಿವಾಚಾರ್ಯರು ಶುಕ್ರವಾರ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಶ್ರೀಗಳು, ನಿತ್ಯ ಸಂಜೆ 6.30 ರಿಂದ ನಡೆಯಲಿರುವ ಆಧ್ಯಾತ್ಮಿಕ ಪ್ರವಚನದ ಸಾನ್ನಿಧ್ಯವನ್ನು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸುವರು.

ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರ ನೇತೃತ್ವದಲ್ಲಿ ಹಿರೇಮಠದ ಶರಣಬಸವ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಬಂಡಿಗಣಿಯ ಅನ್ನದಾನೇಶ್ವರ ಶ್ರೀಗಳ ಸಮ್ಮುಖ ವಹಿಸುವರು. ಶಾಸಕ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಶೇಖರ ಮಾಲಾಪುರ, ಶ್ರೀಪಾದ ಬಾಣಕಾರ, ಶ್ರೀಶೈಲ ಧಬಾಡಿ, ಮಲ್ಲಿಕಾರ್ಜುನ ತುಂಗಳ ಆಗಮಿಸುವರು. ನಿತ್ಯ ಜೀವನ ದರ್ಶನ ವಿಷಯದಡಿ ಚಟ್ಟರಕಿಯ ಶಂಕ್ರಯ್ಯ ಶಾಸಿಗಳಿಂದ ಪ್ರವಚನ ನಡೆಯಲಿದೆ.

ನಗರದ ಹಿರಿಯರಾದ ಚನ್ನವೀರಪ್ಪ ಹಾದಿಮನಿ, ದಾನಪ್ಪ ಹುಲಜತ್ತಿ, ಸುಭಾಸ ಜಾಡಗೌಡ, ಪಂಡಿತ ಪಟ್ಟಣ, ಪ್ರಶಾಂತ ಕೊಳಕಿ, ಶಿವಕುಮಾರ ಜುಂಜಪ್ಪನವರ, ಗುರಸಿದ್ದಪ್ಪ ಚನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net