ಸ್ಪಿರಿಟ್ ಟ್ಯಾಂಕರ್​ ಪಲ್ಟಿ

0101010101
Published on

ಉಳ್ಳಾಗಡ್ಡಿ-ಖಾನಾಪೂರ: ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಕೆಲಕಾಲ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಸ್ಪಿರೀಟ್ ತುಂಬಿಕೊಂಡು ಬೆಳಗಾವಿಯಿಂದ ಕೊಲ್ಲಾಪುರಕ್ಕೆ ತೆರಳುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಉರಳಿ ಬಿದ್ದಿದೆ.

ಯಮಕನಮರಡಿ ಠಾಣೆಯ ಪಿಎಸ್‌ಐ ರಮೇಶ ಪಾಟೀಲ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಜನರ ಆತಂಕವನ್ನು ದೂರ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net