ಕರೊನಾ 40 ಪ್ರಕರಣಗಳು ಪತ್ತೆ

Covid
Published on

ಚಿಕ್ಕಮಗಳೂರು: ಕರೊನಾ ಎರಡನೇ ಅಲೆಯ ಭೀತಿ ಆವರಿಸಿಕೊಂಡ ಬಳಿಕ 8, 10 ಪ್ರಕರಣಗಳಿಗೆ ಸೀಮಿತವಾಗಿದ್ದ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 40 ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ತಂದೊಡ್ಡಿದೆ.

ಬೆಂಗಳೂರು, ರಾಜ್ಯದ ಗಡಿ ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಮುಂಜಾಗ್ರತೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡುತ್ತಲೇ ಇತ್ತು. ಬೆಂಗಳೂರು ಮತ್ತಿತರ ಹೊರ ಜಿಲ್ಲೆಗಳ ಮೂಲದ್ದಾಗಿ ಪ್ರತಿದಿನ ಏಳೆಂಟು ಪ್ರಕರಣಕ್ಕೆ ಸೀಮಿತವಾಗಿದ್ದವು. ಆದರೆ ಶನಿವಾರ ಪತ್ತೆಯಾಗಿರುವ 40 ಪ್ರಕರಣಗಳು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಸಂಬಂಧಿಸಿದ್ದು, ಸಮುದಾಯಕ್ಕೆ ಹರಡುತ್ತಿರುವ ಭೀತಿಗೆ ಕಾರಣವಾಗಿದೆ.

ತಾಲೂಕುವಾರು ಮಾಹಿತಿಯ ಪ್ರಕಾರ ತರಿಕೆರೆ 11, ಕೊಪ್ಪ 10, ಚಿಕ್ಕಮಗಳೂರು 9, ಕಡೂರು 4, ಶೃಂಗೇರಿ 3, ಮೂಡಿಗೆರೆ 2 ಹಾಗೂ ಎನ್.ಆರ್.ಪುರದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಪ್ರಸ್ತುತ 83 ಮಂದಿ ಚಿಕಿತ್ಸೆಯಲ್ಲಿದ್ದು, ಶನಿವಾರ ಒಟ್ಟು 11 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಮೊದಲ ಹಂತದ ಕರೊನಾ ಸೋಂಕಿತರು ಸೇರಿ ಒಟ್ಟು 14,186 ಮಂದಿ ಸೋಂಕಿತರಾಗಿದ್ದು, 139 ಮಂದಿ ಸಾವಿಗೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net