ಸ್ಫೂರ್ತಿ ರಾಜ್ಯಕ್ಕೆ 4ನೇ ರ‍್ಯಾಂಕ್

11 Dwd 1 Sphoorti Turayi
Published on

ಧಾರವಾಡ: ನಗರದ ಪ್ರಜೆಂಟೇಶನ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ಫೂರ್ತಿ ತುರಾಯಿ 2023- 24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರುಮೌಲ್ಯೃಮಾಪನದಲ್ಲಿ 625ಕ್ಕೆ 622 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾಳೆ. ಈ ಮೊದಲು ಬಂದ ಫಲಿತಾಂಶದಲ್ಲಿ 615 ಅಂಕ ಪಡೆದಿದ್ದಳು. ಮರುಮೌಲ್ಯಮಾಪನದಲ್ಲಿ ಗಣಿತಕ್ಕೆ 2 ಮತ್ತು ಕನ್ನಡಕ್ಕೆ 5 ಹೆಚ್ಚುವರಿ ಅಂಕ ಬಂದಿವೆ. ಸಾಧಕ ವಿದ್ಯಾರ್ಥಿನಿಯನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net