

ರಾಯಚೂರು: ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ವಸತಿ ಯೋಜನೆಯಡಿ ಕೈಗೊಂಡಿರುವ ಮನೆ ನಿರ್ಮಾಣ ಕಾಮಗಾರಿ ಕುಂಠಿತವಾಗಿದ್ದು, ಕೂಡಲೇ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಸಿದವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ರಾಜೀವಗಾಂ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಪರಶುರಾಮಗೌಡ ಎಚ್ಚರಿಸಿದರು.
ಸ್ಥಳೀಯ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಗರ, ಸ್ಥಳೀಯ ಸಂಸ್ಥೆಗಳ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆ ನಿರ್ಮಾಣ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಜಿಲ್ಲೆಗೆ 11,543 ಮನೆಗಳು ಮಂಜೂರಾಗಿವೆ. ಅದರಲ್ಲಿ ಕೇವಲ 5,167 ಮನೆಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಜತೆಗೆ ಜಿಯೋ ಟ್ಯಾಗ್ ಮಾಡುವಲ್ಲಿಯೂ ಪ್ರಗತಿ ಸಾಸಲಾಗಿಲ್ಲ. ಲಾನುಭವಿಗಳ ಸ್ವಂತ ಮನೆ ಕನಸು ಮಾಡುವಲ್ಲಿ ಅಕಾರಿಗಳು ವಿಲರಾಗಿದ್ದಾರೆ.
ರಾಯಚೂರು ನಗರಸಭೆಗೆ 1,801 ಮನೆ ಮಂಜೂರಾಗಿದ್ದು 768 ಪೂರ್ಣಗೊಂಡಿವೆ. ಸಿಂಧನೂರು ನಗರಸಭೆಗೆ 1,641 ಮನೆ ಮಂಜೂರಾಗಿದ್ದು 710 ಮನೆ ಮಾತ್ರ ಪೂರ್ಣಗೊಳಿಸಲಾಗಿದೆ. ಲಿಂಗಸುಗೂರು, ದೇವದುರ್ಗ, ಮುದಗಲ್, ಸಿರವಾರ ಸ್ಥಳೀಯ ಸಂಸ್ಥೆಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಮನೆ ನಿರ್ಮಾಣ ಮಾಡಲು ಎನ್ನೆಷ್ಟು ವರ್ಷ ಬೇಕು.
ಅನುದಾನ ಲಭ್ಯತೆಯಿದ್ದರೂ ಕಾಮಗಾರಿ ನಿರ್ವಹಿಸುತ್ತಿಲ್ಲ. ಬಹಳಷ್ಟು ಮನೆ ನಿರ್ಮಾಣ ಕಾಮಗಾರಿ ವಿವಿಧ ಹಂತದಲ್ಲಿಯೇ ಉಳಿದಿದ್ದು, ಮನೆ ನಿರ್ಮಾಣವನ್ನು ವಿಶೇಷ ಆದ್ಯತೆಯಾಗಿ ಪರಿಗಣಿಸಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಪರಶುರಾಮಗೌಡ ತಿಳಿಸಿದರು.
ಸಭೆಯಲ್ಲಿ ರಾಜೀವಗಾಂ ವಸತಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ದತ್ತಾತ್ರೇಯ ಸಿಂದಗಿ, ಜಿ.ಪಂ. ಯೋಜನಾಕಾರಿ ಪ್ರಕಾಶ ವಡ್ಡರ ಹಾಗೂ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಮುಖ್ಯಾಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.