

ಬೆಂಗಳೂರು: ವೈಜ್ಞಾನಿಕವಾಗಿ ಸಾಕ್ಷ$್ಯಗಳನ್ನು ಕಲೆಹಾಕಿ, ಅಪರಾಧಿಗಳನ್ನು ಪತ್ತೆ ಹಚ್ಚಿ ಶಿೆ ಕೊಡಿಸಲು ವಿಧಿ ವಿಜ್ಞಾನ ಪ್ರಯೋಗಾಲಯ (ಎ್ಎಸ್ಎಲ್) ಸಹಕಾರಿಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದರು. ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ "ಆನ್ಲೈನ್ ವೇದಿಕೆ' ಮೂಲಕ ಚಾಲನೆ ನೀಡಿ ಮಾತನಾಡಿದರು. ಪೊಲೀಸರ ಇ&ಬೀಟ್ (ಸ್ಮಾರ್ಟ್ ಪೊಲೀಸಿಂಗ್) ಸಿಸ್ಟಮ್ಗೂ ಚಾಲನೆ ಕೊಡಲಾಗಿದೆ. ಇ&ಬೀಟ್ ಪರಿಕಲ್ಪನೆ ಇಡೀ ಕರ್ನಾಟದಲ್ಲಿ ಜಾರಿಗೆ ಬರಲಿದೆ. ಇದು ಪೊಲೀಸ್ ಸೇವೆಗಳ ವೇಗವನ್ನು ಹೆಚ್ಚಿಸಲಿದೆ. ಇ&ಬೀಟ್ ವ್ಯವಸ್ಥೆಯನ್ನು ಚಂಡಿಗಢ್ನಲ್ಲಿ ಪರಿಣಾಮಕಾರಿಯಾಗಿ ಅಳವಡಿಸಲಾಗಿದೆ. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಗೃಹ ಸಚಿವ ಆರಗ ಾನೇಂದ್ರ ಮಾತನಾಡಿ, ಅಮಿತ್ ಷಾ ದೂರದೃಷ್ಟಿಯ ಲವಾಗಿ ರಾಷ್ಟ್ರೀಯ ವಿಧಿವಿಜ್ಞಾನ ವಿವಿ ರೂಪುಗೊಂಡಿದ್ದು, ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ಗುಜರಾತಿನಲ್ಲಿರುವ ವಿಧಿ ವಿಾನ ವಿಶ್ವವಿದ್ಯಾಲಯದ ಕ್ಯಾಂಪಸ್ಸನ್ನು ರಾಜ್ಯದಲ್ಲಿ ತೆರೆಯಲು ಕೇಂದ್ರ ಸರ್ಕಾರವನ್ನು ಕೋರಲಾಗಿದ್ದು, ಇದಕ್ಕಾಗಿ 50 ಎಕರೆ ಜಮೀನನ್ನು ಮೀಸಲಿಡಲಾಗಿದೆ. ಇದಕ್ಕೆ ಷಾ ಭಾಗಶ@ ಒಪ್ಪಿಗೆಯನ್ನೂ ಸೂಚಿಸಿದ್ದಾರೆ ಎಂದು ತಿಳಿಸಿದರು.
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ವಿಶೇಷತೆ: ಬಳ್ಳಾರಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ 153 ವೈಾನಿಕ ಅಧಿಕಾರಿಗಳು, 42 ಸಹಾಯಕರು, 205 ಸೀನ್ ಆಫ್ ಕೆಂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ತರನ್ನು ಉಪಯೋಗಿಸಿಕೊಂಡು ಪ್ರಾದೇಶಿಕ ವಿಧಿ ವಿಾನ ಪ್ರಯೋಗಾಲಯಗಳಲ್ಲಿ ಹೆಚ್ಚುವರಿ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ. ಇತ್ತೀಚಿನ ಅಪರಾಧ ಕೃತ್ಯಗಳನ್ನು ಗಮನದಲ್ಲಿರಿಸಿಕೊಂಡು ಪ್ರಯೋಗಾಲಯಗಳಲ್ಲಿ ಕಂಪ್ಯೂಟರ್ ೋರೆನ್ಸಿಕ್, ಮೊಬೈಲ್ ಮತ್ತು ಆಡಿಯೋ/ ವಿಡಿಯೋ ೋರೆನ್ಸಿಕ್ ಮತ್ತು ಡಿಎನ್ಎ ಪರೀಾ ಸೌಲಭ್ಯಗಳನ್ನು ಪ್ರಾರಂಭಿಸಲಾಗುತ್ತಿದೆ. ಪ್ರಸ್ತುತ ಈ ಸೌಲಭ್ಯಗಳು ಬೆಂಗಳೂರಿನಲ್ಲಿರುವ ರಾಜ್ಯ ನ್ಯಾಯ ವಿಾನ ಪ್ರಯೋಗಾಲಯಗಳಲ್ಲಿ ಮಾತ್ರ ಲಭ್ಯವಿದೆ. ಈ ಪ್ರಯೋಗಾಲಯದ ಸೀನ್ ಆಫ್ ಕೆಂ ಅಧಿಕಾರಿಗಳಿಗೆ ಎಲ್ಲ ರೀತಿಯ ಮಾದರಿ ಸಂಗ್ರಹಣಾ ಸಾಧನಗಳು ಹಾಗೂ ಪರೀಾ ಸೌಲಭ್ಯಗಳಿರುವ ಸಂಚಾರಿ ಫೋರೆನ್ಸಿಕ್ ವಾಹನಗಳನ್ನು ಒದಗಿಸಲಾಗಿದೆ. ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವು ಆಧುನಿಕ ಉಪಕರಣಗಳನ್ನು ಒಳಗೊಂಡಿದ್ದು, ಅಪರಾಧ ಪ್ರಕರಣವನ್ನು ಬೇಧಿಸಲು ಸಹಕಾರಿಯಾಗಲಿದೆ.
ಸ್ಮಾರ್ಟ್ ಇ&ಬೀಟ್ ಆ್ಯಪ್ ಲೋಕಾರ್ಪಣೆ
ಪ್ರಧಾನ ಮಂತ್ರಿಯವರ ನಿರ್ದೇಶನದನ್ವಯ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯಾದ್ಯಂತ ಸ್ಮಾರ್ಟ್ ಇ& ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸ್ಮಾರ್ಟ್ ಇ&ಬೀಟ್ ವ್ಯವಸ್ಥೆಯು ಕ್ಯೂಆರ್ ಕೋಡ್ ತಂತ್ರಾನವುಳ್ಳ ಬೀಟ್ ವ್ಯವಸ್ಥೆಯಾಗಿದೆ. ಕ್ಯೂಆರ್ ಕೋಡ್ ಅನ್ನು ಮೊಬೈಲ್ ಫೋನ್ ಮೂಲಕ ಸ್ಕಾ$್ಯನ್ ಮಾಡಿದ ಕೂಡಲೇ ಸ್ಥಳದ ರೇಖಾಂಶ ಹಾಗೂ ಅಾಂಶಗಳನ್ನು ದಾಖಲಿಸಿಕೊಳ್ಳುತ್ತದೆ. ಈ ಬೀಟ್ ವ್ಯವಸ್ಥೆಯಲ್ಲಿ ಸ್ಕಾ$್ಯನ್ ಮಾಡಿದ ಕೂಡಲೇ ಸ್ಥಳದ ವಿವರವನ್ನು (ಲೋಕೇಷನ್) ದಾಖಲಿಸಿಕೊಳ್ಳುವುದರಿಂದ ಯಾವುದೇ ರೀತಿಯ ತಿದ್ದುಪಡಿಯ ಸಾಧ್ಯತೆಗಳಿರುವುದಿಲ್ಲ. ಪ್ರಸ್ತುತ ಅಂದಾಜು 50 ಸಾವಿರ ಬೀಟ್ ಕೇಂದ್ರಗಳಲ್ಲಿ ಈ ಕ್ಯೂಆರ್ ಕೋಡ್ಗಳನ್ನು ಸ್ಥಾಪಿಸಲಾಗಿದೆ. ಇವುಗಳು ಮೊಬೈಲ್ ಆಪ್ ಮುಖಾಂತರ ಕಾರ್ಯನಿರ್ವಹಿಸುತ್ತವೆ. ಈ ಆ್ಯಪ್ ಮುಖಾಂತರ ಸ್ಥಳದ ಬಗೆಗಿನ ಎಲ್ಲ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸ್ಥಳಿಯ ಸಂಶಯಾಸ್ಪದ ವ್ಯಕ್ತಿಗಳು ವಾಸಿಸುವ ಸ್ಥಳದ ಮಾಹಿತಿ ಪಡೆಯಬಹುದಾಗಿದೆ. ಅದಲ್ಲದೇ, ಅವರ ಬೆರಳು ಮುದ್ರೆಗಳನ್ನೂ ಸಹ ಅವಲೋಕಿಸಬಹುದಾಗಿದೆ. ಪ್ರತಿಯೊಂದು ಬೀಟ್ ಕೇಂದ್ರದಲ್ಲಿ ಸ್ಕಾ$್ಯನ್ ಮಾಡಿದ ಕೂಡಲೇ ಸದರಿ ಕಟ್ಟಡದ ಮಾಲೀಕರಿಗೆ ಸ್ವಯಂಚಾಲಿತ ಸಂದೇಶ ರವಾನೆಯಾಗುವ ಸೌಕರ್ಯವನ್ನು ಹೊಂದಿರುವ ಈ ಬೀಟ್ ವ್ಯವಸ್ಥೆಯು ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರುವ ಸಾಧನವಾಗಿದೆ.